ಬಿಗ್ ಮನೆಗೆ ಭಾಯ್ ಜಾನ್ ಎಂಟ್ರಿ

ಬಿಗ್  ಮನೆಗೆ ಭಾಯ್ ಜಾನ್  ಎಂಟ್ರಿ

ಬೆಂಗಳೂರು, ಡಿ. 8 : ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕನ್ನಡ ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ ವೇದಿಕೆಗೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಹೌದು…ಶನಿವಾರ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಹಿಂದಿ ಬಿಗ್ಬಾಸ್ ವೇದಿಕೆಯಿಂದ ನಟ ಸಲ್ಮಾನ್ ಖಾನ್ ಕನ್ನಡ ಬಿಗ್ಬಾಸ್ ಶೋನಲ್ಲಿ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. “ಬಿಗ್ಬಾಸ್ ವೇದಿಕೆಯಿಂದ ಸಲ್ಮಾನ್ ಖಾನ್ ಸರ್ ಅವರನ್ನು ಸಂಪರ್ಕಿಸಲಾಗಿತ್ತು. ನಿಜಕ್ಕೂ ಹಿಂದಿ ಬಿಗ್ಬಾಸ್ ವೇದಿಕೆಯಿಂದ ಕನ್ನಡ ಬಿಗ್ಬಾಸ್ಗೆ ಇದೇ ಮೊದಲ ಬಾರಿಗೆ ವಿಡಿಯೋ ಕಾಲ್ ಬಂದಿತ್ತು. ಅದರಲ್ಲೂ ನನ್ನ ದೊಡ್ಡಣ್ಣನೊಂದಿಗೆ ಇದ್ದಿದ್ದು ನನಗೆ ತುಂಬಾ ಖುಷಿ ತಂದಿದೆ. ‘ದಬಾಂಗ್3’ ಸಿನಿಮಾ ಯಾವಾಗಲು ನನಗೆ ಬಹಳ ವಿಶೇಷವಾಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos