ಸುದೀಪ್ ಸೈಕಲ್ ಸವಾರಿ

ಬೆಂಗಳೂರು, ನ. 28 : ಕಿಚ್ಚ ಸುದೀಪ್ ಮಧ್ಯರಾತ್ರಿ ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ ಓಡಿಸಿ ಸುದ್ದಿಯಾಗಿದ್ದರು. ಈಗ ಅವರು ಮತ್ತೊಮ್ಮೆ ಇಂತಹದ್ದೇ ಕೆಲಸ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಸುದೀಪ್ ಸೈಕಲ್ ಹತ್ತಿ ಬೆಂಗಳೂರಿನ ರಸ್ತೆಗಿಳಿದಿದ್ದಾರೆ.
ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಕಂಠೀರವ ಸ್ಟುಡಿಯೋಗೆ ಸೈಕಲ್ನಲ್ಲೇ ಹೋಗಿದ್ದಾರೆ. ಹೀಗೆ ಕಿಚ್ಚ ತಮ್ಮ ಸೈಕಲ್ ಸವಾರಿಯನ್ನು ಎಂಜಾಯ್ ಮಾಡಿದ್ದಾರೆ. ‘ಕೋಟಿಗೊಬ್ಬ 3’ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಅಲ್ಲಿಗೆ ಸುದೀಪ್ ಸೈಕಲ್ನಲ್ಲೇ ಹೋಗಿದ್ದಾರೆ. ಅವರು ಉಳಿದುಕೊಂಡಿದ್ದ ಹೋಟೆಲ್ನಿಂದ ಬೆಳಗ್ಗೆನೇ ಸೈಕಲ್ ಹತ್ತಿ ಸವಾರಿ ಹೊರಟ ಸುದೀಪ್, ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಶಾರ್ಟ್ ಜೀನ್ಸ್ ಪ್ಯಾಂಟ್ ತೊಟ್ಟು ಬೆಂಗಳೂರಿನ ರಸ್ತೆಯಲ್ಲಿ ಸೈಕಲ್ ತುಳಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos