‘ಭೀಮ’ ಸಿನಿಮಾ ಒಟಿಟಿಗೆ ಲಗ್ಗೆ

‘ಭೀಮ’ ಸಿನಿಮಾ ಒಟಿಟಿಗೆ ಲಗ್ಗೆ

ಬೆಂಗಳೂರು: ದುನಿಯಾ ವಿಜಯ್ ಅವರ ನಟನೆ ಹಾಗೂ ನಿರ್ದೇಶನದ ಭೀಮ ಸಿನಿಮಾ ರಾಜ್ಯದಲ್ಲೆಡೆ ಭರ್ಜರಿ ಪ್ರದರ್ಶನ ಕಂಡಿದ್ದು ಇದೀಗ ಭೀಮ ಚಿತ್ರ ಓಟಿಪಿಗೆ ಲಗ್ಗೆ ಇಡಲು ಮುಂದಾಗಿದೆ.

ಯೆಸ್…ರಾಜ್ಯದ ರಾಜಧಾನಿ ಬೆಂಗಳೂರಿನ ಕಥೆ ಹಂದರವನ್ನು ಹೊಂದಿರುವ ಭೀಮ ಸಿನಿಮಾ ಯುವಕ ಯುವಕರಿಗೆ ಒಂದೊಳ್ಳೆ ಸಂದೇಶವನ್ನು ನೀಡುವ ಸಿನಿಮಾ ಇದಾಗಿದ್ದು, ಡ್ರಗ್‌ ವ್ಯಸನವನ್ನೇ ಪ್ರಧಾನ ಕಥೆಯನ್ನಾಗಿ ಮಾಡಿಕೊಂಡ ದುನಿಯಾ ವಿಜಯ್‌ ಮತ್ತು ಅವರ ತಂಡ, ಯುವ ಪೀಳಿಗೆ ಹಾದಿ ತಪ್ಪುತ್ತಿರುವುದು ಎಲ್ಲಿ, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಕೆಲಸ ಏನು ಎಂಬುದನ್ನು ಭೀಮ ಸಿನಿಮಾ ಮೂಲಕ ತೆರೆಮೇಲೆ ತಂದಿದ್ದಾರೆ. ಇದನ್ನೂ ಓದಿ: ಝೈದ್ ಖಾನ್ ನಟನೆಯ ಚಿತ್ರಕ್ಕೆ ಮಲೈಕಾ ನಾಯಕಿ

ಭೀಮ ಚಿತ್ರದ ಯಶಸ್ಸಿನ ಬೆನ್ನಲ್ಲೇ ದುನಿಯಾ ವಿಜಯ್ ಅವರು ಇತ್ತೀಚೆಗೆ ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದರು. ಚಿತ್ರಕ್ಕೆ ‘ವಿಕೆ 30’ ಎಂಬ ತಾತ್ಕಾಲಿಕ ಶೀರ್ಷಿಕೆಯನ್ನು ನೀಡಲಾಗಿದೆ.

ಅದೇನೇ ಆಗಲಿ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಮೂಡಿ ಬರುತ್ತಿರುವ ಚಿತ್ರಗಳೆಲ್ಲ ಸೂಪರ್ ಡೂಪರ್ ಹಿಟ್ ಆಗುತ್ತಿರುವುದು ಕನ್ನಡ ಭಾಷೆಗೆ ಇಡೀ ಪ್ರಪಂಚದಾದ್ಯಂತ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

 

ಫ್ರೆಶ್ ನ್ಯೂಸ್

Latest Posts

Featured Videos