ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಕಾಡುತ್ತದೆ ಇದರಿಂದ ಶಾಲಾ ಕಾಲೇಜು ಮಕ್ಕಳಗೆ ಹಾಗೂ ಕೆಲಸಕ್ಕೆ ಹೋಗುವವರಗೆ ಹೆಚ್ಚು ತೊದರೆಗಾಗುತ್ತದೆ. ಈ ಸಮಸ್ಯೆಯಿಂದ ನಾವು ಮುಕ್ತಿ ಹೊಂದಬೇಕು.
ಖಾಸಗಿ ಶಾಲೆಯೊಂದರ ಮುಖ್ಯಸ್ಥರಾಗಿರುವ ಶಿವಕುಮಾರ್, ನ್ಯಾಯಾಲಯ ಸಹ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ, ಶಾಲಾ ವೇಳೆಯನ್ನು ಬದಲಾಯಿಸುವುದರಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಬಹುದೇ ಅಂತ ಪೋಷಕರ, ಶಾಲೆಗಳ ಮುಖ್ಯಸ್ಥರ ಅಭಿಪ್ರಾಯ ಸಂಗ್ರಹಿಸುವುದು ಒಳ್ಳೆಯದು ಅಂತ ಹೇಳಿದೆ. ಆದರೆ, ಶಾಲಾ ವೇಳೆಯನ್ನು ಬದಲಾಯಿಸುವುದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಬೆಳಗ್ಗೆ 7 ಗಂಟೆಗೆ ಇಲ್ಲವೇ 10:30ಕ್ಕೆ ಶಾಲೆಗಳನ್ನು ಅರಂಭಿಸಲಾಗದು. ಒಂದು ಪರಿಹಾರವಂತೂ ಬೇಕೇಬೇಕು ಅಂತ ಹೇಳಿದ ಶಶಿಕುಮಾರ್ ಸರ್ಕಾರದ ಕಡೆಯಿಂದ ಶಾಲಾ ಮುಖ್ಯಸ್ಥರನ್ನು, ಪೋಷಕರನ್ನು ಮತ್ತು ಸಂಬಂಧಪಟ್ಟ ಉಳಿದವರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ಯೋಚನೆ ಏನಾದರೂ ಇದೆಯಾ ಅಂತ ಉಪ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಅವರ ಸಲಹೆಯನ್ನು ಸ್ವಾಗತಿಸಿದ ಶಿವಕುಮಾರ್ ಶಿಕ್ಷಣ ಸಚಿವ ಮತ್ತು ತಾವು ವಿಷಯ ಚರ್ಚಿಸಿ ಸಂಬಂಧಪಟ್ಟವರನ್ನೆಲ್ಲ ಕರೆಸಿ ಮಾತಾಡುವುದಾಗಿ ಹೇಳಿದರು. ಶಾಲಾ ವೇಳೆ ಬದಲಾಯಿಸುವದು ಸಾಧ್ಯವಿಲ್ಲ, ಯಾವುದಾದರೂ ಪರ್ಯಾಯ ವ್ಯವಸ್ಥೆ ಯೋಚಿಸಬೇಕು ಎಂದು ಶಿವಕುಮಾರ್ ಹೇಳಿದರು.