ಡಾಲಿಗೆ ಬಿಯರ್ ಅಭಿಷೇಕ ಅಭಿಮಾನಿಗಳು!

ಡಾಲಿಗೆ ಬಿಯರ್ ಅಭಿಷೇಕ ಅಭಿಮಾನಿಗಳು!

ಬೆಂಗಳೂರು, ಫೆ. 21: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ವಾರ ಕಳೆದರೆ ಸಾಕು ಹತ್ತಾರು ಸಿನಿಮಾಗಳು ತೆರೆ ಕಾಣುತ್ತಿವೆ. ಹೌದು ಡಾಲಿ ಧನಂಜಯ್ ನಟಿಸಿರುವ ಪಾಪ್ಕಾರ್ನ್ ಮಂಕಿ ಟೈಗರ್  ಚಿತ್ರವು ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಇಂದು ಬೆಳಗ್ಗೆ ಬೆಂಗಳೂರಿನ ಸಿದ್ದೇಶ್ವರ ಚಿತ್ರ ಮಂದಿರದಲ್ಲಿ ಫ್ಯಾನ್ಸ್ ಶೋ ಆಯೋಜಿಸಲಾಗಿತ್ತು. ಹೌಸ್ಫುಲ್ ಶೋನಲ್ಲಿ ಡಾಲಿ ಧನಂಜಯ್ ಅಭಿಮಾನಿಗಳ ಆರ್ಭಟ ಜೋರಾಗಿಯೇ ಇತ್ತು. ಸಿನಿಮಾನ ಮೆಚ್ಚಿಕೊಂಡಿರೋ ಡಾಲಿ ಫ್ಯಾನ್ಸ್, ಕಟೌಟ್ಗೆ ಬಿಯರ್ ಅಭಿಷೇಕ ಮಾಡಿದರು.

ಟಗರು ಸ್ಟೈಲ್ನಲ್ಲಿ ಡಾಲಿಗೆ ಅಭಿಮಾನಿಗಳಿಂದ ಬಿಯರ್ ಅಭಿಷೇಕ ಮಾಡಲಾಯ್ತು. ಡಾಲಿ ಡಾಲಿ ಎಂದು ಕೂಗುತ್ತಿದ್ದ ಅಭಿಮಾನಿಗಳು ಚಿತ್ರತಂಡದ ಜೊತೆ ಚಿತ್ರ ವೀಕ್ಷಿಸಿದರು. 300ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos