ಬಳ್ಳಾರಿ: ಪ್ಲಾಸ್ಟಿಕ್ ಮಾರಾಟದ ಮಳಿಗೆಗಳ ಮೇಲೆ ದಾಳಿ

ಬಳ್ಳಾರಿ: ಪ್ಲಾಸ್ಟಿಕ್ ಮಾರಾಟದ ಮಳಿಗೆಗಳ ಮೇಲೆ ದಾಳಿ

ಬಳ್ಳಾರಿ, ಜ. 23: ರಾಜ್ಯದಲ್ಲಿ ಇತ್ತೀಚಿಗೆ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿ, ಮಳಿಗೆಗಳ ಮೇಲೆ ಜಿಲ್ಲೆಯ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ, ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ.

ಹೌದು, ಜಿಲ್ಲೆಯ ಹೊಸಪೇಟೆ ತಾಲೂಕಿನ ನಗರಸಭೆ ಅಧಿಕಾರಿಗಳು ನಗರದಲ್ಲಿನ ಹತ್ತಾರು ಅಂಗಡಿ, ಮಳಿಗೆಗಳ ಮೇಲೆ ನಗರಸಭೆ ಎಂಜಿನಿಯರ್ ಆರತಿ ನೇತೃತ್ವದಲ್ಲಿ ದಾಳಿ ನಡೆಸಿದ್ದು, 300 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಾರಕ್ಕೆ ಒಂದರಿಂದ 2 ಬಾರಿ ನಗರದಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿ, ಹೋಟೆಲ್, ಮಳಿಗೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುತ್ತೇವೆ ಎಂದು ನಗರಸಭೆ ಎಂಜಿನಿಯರ್ ಆರತಿ ಹೇಳಿದ್ದಾರೆ.

ನಗರದ ತರಕಾರಿ ಅಂಗಡಿಗಳು, ಹೂ ಮಾರುವ ವ್ಯಾಪಾರಿಗಳು ಮತ್ತು ಮಳಿಗೆಗಳಲ್ಲಿ ಶೇಖರಣೆ ಮಾಡಿದ್ದ ಟೀ ಕಪ್ಸ್, ಕ್ಯಾರಿ ಬ್ಯಾಗ್ಗಳು, ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನು ಉಲ್ಲಂಘನೆ ಮಾಡಿ ಪ್ಲಾಸ್ಟಿಕ್ ಬಳಸಿದ್ರೆ ಅವುಗಳನ್ನು ವಶಪಡಿಸಿಕೊಂಡು ದೂರು ದಾಖಲಿಸುತ್ತೇವೆ ಎಂದು ಸಾರ್ವಜನಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos