ಖಾಸಗಿ ಬಸ್ ಸಂಚಾರ ಆರಂಭ

  • In State
  • August 4, 2020
  • 138 Views
ಖಾಸಗಿ ಬಸ್ ಸಂಚಾರ ಆರಂಭ

ತುಮಕೂರು:ಲಾಕ್ ಡೌನ್ ನಂತರ ಖಾಸಗಿ ಬಸ್ ಸಂಚಾರ ಆರಂಭ ಹೆಬ್ಬೂರು ಕೊವಿಡ್ ೧೯ ನಿಂದಾಗಿ ಮಾರ್ಚಿ ತಿಂಗಳಿನಲ್ಲಿ ಲಾಕ್ ಡೌನ್ ಜಾರಿಯಾದಾಗಿನಿಂದ ಸ್ಥಗಿತವಾಗಿದ್ದ ಖಾಸಗಿ ಬಸ್ ಸಂಚಾರ ಸೋಮವಾರದಿಂದ ಆರಂಭಿಸಲಾಯಿತು. ತುಮಕೂರು-ಕುಣಿಗಲ್ ಮಾರ್ಗ ದ ಮಧ್ಯೆ ಸುಮಾರು ೧೨ ಖಾಸಗಿ ಬಸ್ ಸಂಚಾರ ಬೆಳ್ಳಗಿನಿಂದ ಆರಂಭವಾಗಿದ್ದು, ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಪ್ರಯಾಣ ಮಾಡಿದರು. ಬಸ್‌ನಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮತ್ತು ಸಾಮಾಜಿಕ ಅಂತರ ಕಡ್ಡಾಯ ಪಾಲನೆ ಮಾಡಲಾಯಿತು. ಸರ್ಕಾರಿ ಬಸ್ ಪ್ರಯಾಣ ದರ ಅಧಿಕವಾದ್ದರಿಂದ ಈಮಾರ್ಗ ದಲ್ಲಿ ಹೆಚ್ಚಿನ ಜನರು ಖಾಸಗಿ ಬಸ್ ಸಂಚಾರವನ್ನ ಅವಲಂಬಿಸಿದಾರೆ. ಬಸ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರನ್ನ ಕರೆದೊಯ್ಯುವವರೆವಿಗೂ ಆರ್ಥಿಕ  ನಷ್ಟ ವಾಗುತ್ತದೆಂದು ಬಸ್ ಮಾಲೀಕರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos