ಭಯಾನಕ ವೈರಸ್ ವಿರುದ್ಧ ಜಾಗೃತರಾಗಿ

ಭಯಾನಕ ವೈರಸ್ ವಿರುದ್ಧ ಜಾಗೃತರಾಗಿ

ಬಾಗಲಕೋಟೆ, ಮಾ. 28: ಭಾರತಕ್ಕೆ ನುಗ್ಗಿರುವ ಕರೋನಾ ವೈರಸ್ ಬಗ್ಗೆ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಮತ್ತು ಮಹಾಲಿಂಗಪುರ ಪೋಲಿಸ್ ಠಾಣಾಧಿಕಾರಿಗಳಾದ ರಾಜು ಬೀಳಗಿ ಅವರು ಮಹಾಲಿಂಗಪುರ ಪಟ್ಟಣದಲ್ಲಿ ಜಾಗೃತಿ ಮೂಡಿಸಿದರು.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ  ಕರೋನಾ ವೈರಸ್ ಮಾರಕ ರೋಗದ ಬಗ್ಗೆ ಸಾರ್ವಜನಿಕರಿಗೆ ತೆರೆದ ವಾಹನದ ಮೂಲಕ ಜಾಗೃತಿ ಮೂಡಿಸಿದರು. ಇಡಿ ವಿಶ್ವವನ್ನೇ ಬೆಚ್ಚೆ ಬೀಳಿಸಿರುವ ಕೋವಿಡ್ 19 ಕರೋನಾ ವೈರಸ್ ಭಾರತಕ್ಕೆ ಬಂದಿದ್ದು, ಈಗ ದೇಶದ ಕೆಲವು ಭಾಗಗಳಲ್ಲಿ ಪತ್ತೆಯಾಗಿದೆ. ಮುನ್ನೆಚ್ಚರಿಕೆಯಾಗಿ ಈಗಾಗಲೇ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ.

ಜನರಲ್ಲಿ ಹಲವಾರು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕರ್ಫ್ಯೂ ವಿಧಿಸಿದೆ. ಆದರೂ ಕೂಡ  ಜನರು ಲಾಕ್ ಡೌನ್ ಕರ್ಫ್ಯೂ ಉಲ್ಲಂಘಿಸುತ್ತಿರುವುದು ಕಂಡು ಬರುತ್ತಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ, ತರಕಾರಿಗಳನ್ನು ಖರೀದಿಸಬೇಕು. ಗುಂಪು-ಗುಂಪಾಗಿ ಹೋಗಬಾರದೆಂದು ಶಾಸಕರು ಹೇಳಿದರು. ಸ್ವತಹ ಶಾಸಕರು ತೆರದ ವಾಹನದಲ್ಲಿ ಜಾಗೃತಿ ಮೂಡಿಸುತ್ತಿರುವದು ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos