ಟೊಲ್ ಗೇಟ್ ಸಿಬ್ಬಂದಿಯಿಂದ ಗೂಂಡಾಗಿರಿ

ಟೊಲ್ ಗೇಟ್ ಸಿಬ್ಬಂದಿಯಿಂದ ಗೂಂಡಾಗಿರಿ

ಆನೇಕಲ್, ಫೆ. 26: ಇತ್ತೀಚಿನ ದಿನಗಳಲ್ಲಿ ಟೋಲ್ ನಲ್ಲಿ  ಹೆಚ್ಚಿನ ತೊಂದರೆ ಆಗುತ್ತಿದ್ದ ಕಾರಣದಿಂದ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ಟೊಲ್ ಗೇಟ್ ನಲ್ಲಿ ಹೆಚ್ಚಿನ ತೊಂದರೆಯಾಗಬಾರದೆಂದು ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ, ಫಾಸ್ಟ್ ಟ್ಯಾಗ್ ವ್ಯವಸ್ಥೆ ಅಳವಡಿಸಿದ್ದರು ಸಹ  ಟೊಲ್ ಗೇಟ್ ನಲ್ಲಿ  ಯಾವುದೆ ಪ್ರಯೋಜನ ಆಗುತ್ತಿಲ್ಲ.

ಫಾಸ್ಟ್ ಟ್ಯಾಗ್ ಇದ್ದರು ಸಹ ಟೊಲ್ ಗೇಟ್ ಓಪನ್ ಆದಿಲ್ಲವೆಂದು ಡ್ರೈವರ್ ಸಿಬ್ಬಂದಿಗೆ ಕೇಳಿದ್ದಕ್ಕೆ ಡ್ರೈವರ್ ಗೆ ಎರ ಬಿರಿ ಥಳಿಸಿರುವ ಘಟನೆ ನಡೆದಿದೆ. ಅತ್ತಿಬೆಲೆ BETL ಟೊಲ್ ಗೇಟ್ ಸಿಬ್ಬಂದಿಯಿಂದ ಗೂಂಡಾಗಿರಿ. ಜಗದೀಶ್ ಎಂಬುವವರನ್ನ ಮನಸೋ ಇಚ್ಚೆ ಥಳಿಸಿದ ಪುಡಿ ರೌಡಿಗಳು. ಅತ್ತಿಬೆಲೆಯಿಂದ ಹೊಸೂರು ಮಾರ್ಗವಾಗಿ ತೆರಳುತ್ತಿದ್ದ ಜಗದೀಶ್. ಟೊಲ್ ನಲ್ಲಿ  ಫಾಸ್ಟ್ ಟ್ಯಾಗ್ ಇದ್ದರೂ ಗೇಟ್ ತೆರೆಯದ ಹಿನ್ನೆಲೆ ಇದನ್ನ ಪ್ರಶ್ನಿಸಿದ್ದಕ್ಕೆ ಟೊಲ್ ಗೇಟ್ ಸಿಬ್ಬಂದಿಯಿಂದ ಹಲ್ಲೆ. ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ. ಮುಖ ಹಾಗೂ ಹೊಟ್ಟೆಗೆ ಹೊಡೆದು ಗಾಯಗೊಳಿಸಿರುವ ಗೂಂಡಾಗಳು. ಬಳಿಕ ಸ್ಥಳಕ್ಕೆ ಬಂದ ಪೊಲೀಸರಿಂದಲೂ  ಜಗದೀಶ ಮೇಲೆ ಹಲ್ಲೆ. ಕಾಲಿನಿಂದ ಒದ್ದು ದರ್ಪ ತೋರಿಸುವ ಪೊಲೀಸ್ ನ್ಯಾಯ ಕೇಳಿದಕ್ಕೆ ಜಗದೀಶ್ ಗೆ ಥಳಿಸಿದ ಪೊಲೀಸರು ಹಾಗೂ BETL ಗೂಂಡಾಗಳು. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು.

ಫ್ರೆಶ್ ನ್ಯೂಸ್

Latest Posts

Featured Videos