ಹಳದಿ ಅಲರ್ಟ್ ಘೋಷಿಸಿದ ಬಿಬಿಎಂಪಿ

ಹಳದಿ ಅಲರ್ಟ್ ಘೋಷಿಸಿದ ಬಿಬಿಎಂಪಿ

ಬೆಂಗಳೂರು, ಅ. 22: ರಾಜಧಾನಿಯಲ್ಲಿ  ನಿನ್ನೆ ಮಧ್ಯಾಹ್ನದಿಂದ ಶುರುವಾದ ಮಳೆ ಇಂದು ಮುಂಜಾನೆವರೆಗೂ ಮುಂದುವರಿದಿದ್ದರಿಂದ ತಗ್ಗುಪ್ರದೇಶಗಳಲ್ಲಿರುವ ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಸದಾಶಿವನಗರ, ಮೇಖ್ರಿ ಸರ್ಕಲ್, ಜಯನಗರ, ಬಿಟಿಎಂ, ಮೈಕೋ ಲೇಔಟ್ ಹೆಚ್.ಎಸ್.ಆರ್ ಲೇಔಟ್, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಜೆಸಿ ರೋಡ್ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಮಳೆ ಸುರಿದಿದೆ. ಬಿಟಿಎಂ ಎರಡನೇ ಹಂತದಲ್ಲಿ ಮರ ಬಿದ್ದಿದೆ.

ನಗರದಲ್ಲಿ 65 ರಿಂದ 115 ಮಿ.ಮೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಿಬಿಎಂಪಿಯ ನೂತನ  ಮೇಯರ್ ಗೌತಮ್ ಕುಮಾರ್ ಫುಲ್ ಅಲರ್ಟ್ ಆಗಿದ್ದಾರೆ. ಗೌತಮ್ ಕುಮಾರ್ ಅವರು ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳಿಗೆ ತುರ್ತು ಸಭೆ ಕರೆದಿದ್ದರು. ಈ ಸಭೆಯಲ್ಲಿ ಮಳೆಯಿಂದ ಆಗುವ ಹಾನಿಗಳು ಹಾಗೂ ಅನಾಹುತಗಳನ್ನು ತಡೆಗಟ್ಟುವ ಕುರಿತು ಚರ್ಚೆ ಮಾಡಿದ್ದಾರೆ.

ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆ ನಗರದಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos