ಟ್ರಾಫಿಕ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ, ಜನರಿಗಿಲ್ಲಾ ಸುರಕ್ಷತೆ!

ಟ್ರಾಫಿಕ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ, ಜನರಿಗಿಲ್ಲಾ ಸುರಕ್ಷತೆ!

ಹೆಬ್ಬಾಳ, ಆ. 3: ಹೆಬ್ಬಾಳ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಒಂದು ಯಾಕೆಂದರೆ, ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಅಲ್ಲಿಂದಲೇ ಹಾದು ಹೋಗಬೇಕು. ಫೈ ಓವರ್  ಆಗಿರೋ ಕಾರಣ ಕೆಳಗಡೆ ವಿಶಾಲವಾದ ಜಾಗ ನಿರ್ಮಾಣ ಆಗಿದೆ.

ತರಕಾರಿ ಹೂ, ತಿಂಡಿ ತಿನಿಸುಗಳು

ಅಲ್ಲಲ್ಲಿ ಸಿಗುವ ಅಷ್ಟೋ ಇಷ್ಟೋ ಜಾಗದಲ್ಲಿಯೇ ಪೆಟ್ಟಿಗೆ ಅಂಗಡಿ, ಹಣ್ಣು , ಹೂವು, ಎಲ್ಲಾ ಬಗೆಯ ತರಕಾರಿ, ಸೊಪ್ಪು, ತಳ್ಳುವ ಗಾಡಿಳಲ್ಲಿ ಇಟ್ಟುಕೊಂಡು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಫಾಸ್ಟ್ ಫುಡ್ ಹೋಟೆಲ್‌ಗಳು, ಪಾನಿಪುರಿ ,ಮಸಾಲಾ ಪುರಿ, ಚಾಟ್ಸ್, ಬಿಸಿ ಬಿಸಿ ದೋಸೆಗಳು, ಮಿರ್ಚಿ ,ಪಕೋಡಾ, ಪಡ್ಡು, ಪಕೋಡ, ಇಡ್ಲಿ ವಡೆ ,ಬೇಕರಿ ತಿನಿಸಿಗಳು, ಕಬ್ಬಿನಾಲು, ಕಣ್ಣಿಗೆ ಬೇಕಾದ ಎಲ್ಲಾ ದಿನ ನಿತ್ಯದ ಆಹಾರ ಪದಾರ್ಥಗಳ ಮೇಳ ಇದ್ದಂತೆ ಇರುತ್ತದೆ ಯಾವುದಕ್ಕೂ ಕೊರತೆ ಇರುವುದಿಲ್ಲ.

ರೈಲ್ವೇ ತಿರವು

 ಫ್ಲೈ ಓವರ್ ಕೆಳಗೆ ರೈಲ್ವೇ ಕ್ರಾಸಿಂಗ್ ಇದ್ದು, ಫ್ಲೈ ಓವರ್ ನಿರ್ಮಾಣ ಆದ ನಂತರ ಇದರ ಸುತ್ತಲೂ ಕಬ್ಬಿಣದ ಬೇಲಿ ಹಾಕಲಾಗಿದೆ. ಬೇಲಿ ಒಳಗಿನಿಂದ ಜನರು ಸುಲಭವಾಗಿ ನುಸುಳಿ ಅತ್ತಿತ್ತ ದಾಟಿ ಹಳಿಗಳ ಮೇಲೆ ಸರತಿ ಸಾಲಿನಲ್ಲಿ ನಡೆದು ಬರ ಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಹಲವು ವೇಗಧೂತ ರೈಲುಗಳು ಅತಿ ಜವೇಗವಾಗಿ ಚಲಿಸುತ್ತಿರುತ್ತವೆ. ಹಾಗಾಗಿ ಇಲ್ಲಿ ಓಡಾಡುವುದು ಸುರಕ್ಷಿತ ಅಲ್ಲ. ಆದರೂ ಅನಿವಾರ್ಯ, ಸಂಭಂಧಿಸಿದ ಅಧಿಕಾರಿಗಳು ಸರಕ್ಷತೆಯ ಬಗ್ಗೆ ಗಮನ ಹರಿಸಿಲ್ಲ. ಆರ್.ಟಿ.ನಗರ,  ಗಂಗೇನಹಳ್ಳಿ, ಸಂಜಯನಗರ, ಭೂಪಸಂದ್ರ, ಹೆಬ್ಬಾಳ ಸುತ್ತಮುತ್ತಲಿನ ಎಲ್ಲಾ ವರ್ಗದ ಜನರು ಈ ಹಳಿ ದಾಟುವುದು ಅನಿವಾರ್ಯ. ವರ್ತುಲ ರಸ್ತೆಯ ಸುತ್ತ ಹರಡಿಕೊಂಡಿರುವ ಐಟಿಬಿಟಿ ಸೇರಿದಂತೆ ಹಲವು ಉದ್ಯಮಗಳಿವೆ.

ನೌಕರರು, ಕಾರ್ಮಿಕರು, ಬಿಎಂಟಿಸಿ ಬಸ್, ಆಟೋ, ಟ್ಯಾಕ್ಸಿ ಗಳಿಗೆ ರೈಲ್ವೇ ಕ್ರಾಸಿಂಗ್ ದಾಟಿ ಅತ್ತಿಂದಿತ್ತ ಓಡಾಡಲೇ ಬೇಕು. ರೈಲು ಹಳಿಗಳ ಇಕ್ಕೆಲಗಳ ಸಣ್ಣದೊಂದು  ಬೇಲಿಯ ಸುತ್ತಲೂ ತರಹೇವಾರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ರಾತ್ರಿಯಿಡೀ ಈ ರೈಲ್ವೇ ಕ್ರಾಸಿಂಗ್ ಬಳಿ ಜನರ ಓಡಾಟವಿರುತ್ತದೆ. ಅಲ್ಲದೆ ಕಳ್ಳ ಕದೀಮರಿಗೂ ಇಲ್ಲಿ ವಿಪುಲ ಅವಕಾಶಗಳಿವೆ. ಹೆಣ್ಣುಮಕ್ಕಳು, ವಯೋವೃದ್ದರು, ದುರ್ಬಲರು, ಒಂಟಿಯಾಗಿ ಬರುವವರನ್ನು ಅತಿ ಸುಲಭವಾಗಿ ಶೋಷಣೆ ಮಾಡಿ ಸುಲಿಗೆ ಮಾಡುವುದಕ್ಕೂ ಅವಕಾಶಗಳಿವೆ.

 ಗಸ್ತು ವ್ಯವಸ್ಥೆ ಇಲ್ಲ

ಪೋಲಿಸ್ ಇಲಾಖೆ ಯಾವುದೆ ರೀತಿಯ ಬೀಟ್ ವ್ಯವಸ್ಥೆ ಇಲ್ಲ. ಮುಖ್ಯವಾಗಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲವೇ ಇಲ್ಲ.

ಫ್ಲೈ ಓವರ್ ಕೆಳಗಿನ ರಸ್ತೆಯ ಟ್ರಾಫಿಕ್ ವ್ಯವಸ್ಥೆ ಅಂತೂ ಅದ್ವಾನ. ಟ್ರಾಫಿಕ್ ಪೋಲಿಸರ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಅದೇ ವಸೂಲಿಗಾದರೆ ಮುಂದೆ ಇರುವ ಪೋಲಿಸರಿಗೆ ಇದು ಕಾಣುತ್ತಿಲ್ಲ ಎಂಬುದಕ್ಕೊಂದು ನಿದರ್ಶನ .

ಸುರಂಗ ಮಾರ್ಗ ಅಥವಾ ಸ್ಕೈವಾಕ್ ಅವಶ್ಯ

ರಸ್ತೆ ದಾಟಲು ಇತರೆ ಸುರಕ್ಷಿತ ಮಾರ್ಗ ಇಲ್ಲದ ಕಾರಣ ಜನರ ಪ್ರಾಣಾಪಾಯಕ್ಕೆ ಬಾಯಿ ತೆರದು ನಿಂತಿದೆ. ಸ್ಕೈವಾಕ್ ಅಥವಾ ಸುರಂಗ ಮಾರ್ಗದಂತ ಬದಲಿ ವ್ಯವಸ್ಥೆ ಕಲ್ಪಿಸಿದ್ದರೆ ಉತ್ತಮವಾಗಿರುತಿತ್ತು, ಎನ್ನುವುದು ಇಲ್ಲಿನ ನಿವಾಸಿಗಳ ಅಭಿಪ್ರಾಯ.

ಸಬೂಬು ಹೇಳುತ್ತಾ ಹೆಬ್ಬಾಳ ಫ್ಲೈ ಓವರ್ ಜಾಗದ ಬಗ್ಗೆ ನಿರ್ಲಕ್ಷ್ಯ ಮುಂದುವರಿದಿದೆ.

ಸುರಕ್ಷತೆಗೆ ಗಮನ ಹರಿಸಲಿ ಮೆಟ್ರೊ ನಿಲ್ದಾಣ ಇನ್ನಿತರ ಪ್ರಮುಖ ಯೋಜನೆಗಳ ತಾಣ ಆಗಿಲಿದೆ, ಹೆಬ್ಬಾಳ ಅಂತೆಲ್ಲ ಹೇಳುತ್ತಿದ್ದ ಅಧಿಕಾರಿಗಳ ಹೇಳಿಕೆ  ಕೇವಲ ಕಾಗದಕ್ಕೆ ಸೀಮಿತವಾಗಿದೆ. ಭವಿಷ್ಯದಲ್ಲಿ ಇಲ್ಲಿಗೆ ಯವುದೇ ಯೋಜನೆಗಳು ಬರದಿದ್ದರೂ ಪರವಾಗಿಲ್ಲ .ತಾತ್ಕಲಿಕವಾಗಿ ಆದರೂ ಜನತೆಯ ಸುರಕ್ಷತೆ ಕಡೆಗೆ ಗಮನ ಹರಿಸಿ, ಮುಂದಾಗುವ ಅನಾಹುತ ತಪ್ಪಿಸಲು ಬಿಬಿಎಂಪಿ‌ ಮತ್ತು ಪೋಲಿಸರು ಮುಂದಾದರೆ ಸಾಕು ಎಂದು ವೆಂಕಟೇಶ ಮೂರ್ತಿ, ಹೆಬ್ಬಾಳ ನಿವಾಸಿ ಹಾಗೂ ಸಮಾಜ ಸೇವಾಕರ್ತ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos