ಕೆಸರು ಗದ್ದೆಯಾದ ಬಸ್ತಿಹಳ್ಳಿ ಗ್ರಾಮದ ರಸ್ತೆ

ಕೆಸರು ಗದ್ದೆಯಾದ ಬಸ್ತಿಹಳ್ಳಿ ಗ್ರಾಮದ ರಸ್ತೆ

ತಿಪಟೂರು, ಡಿ. 02: ತಾಲ್ಲೂಕಿನ ನವಿ ಕೆರೆ ಹೋಬಳಿ ನೆಲ್ಲಿಗೆರೆ ಗ್ರಾಮ ಪಂಚಾಯಿತಿಗೆ ಸೇರಿದ ಬಸ್ತಿಹಳ್ಳಿ ಗ್ರಾಮದ ನೊಣವಿನಕೆರೆಯಿಂದ ಬುರುಡೆ ಘಟ್ಟಕ್ಕೆ ಹಾದುಹೋಗುವ ಬಸ್ತಿಹಳ್ಳಿ ಗ್ರಾಮದ ಹೃದಯ ಭಾಗದಲ್ಲಿ ಇರುವ ಈ ರಸ್ತೆಯು ಯಾವ ದುಃಸ್ಥಿತಿಯಲ್ಲಿ ಇದೆ ಎಂದರೆ ಸಂಪೂರ್ಣ ಕೆಸರುಮಯ ನಿಂದ ಕೂಡಿದ್ದು, ಇನ್ನೇನು ನಾಟಿ ಮಾಡಿದರೆ ಬೆಳೆಗಳನ್ನು  ಬೆಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಂತ ನೀರಿನಲ್ಲಿ ಸೊಳ್ಳೆಗಳು ಹಾಗೂ ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದ್ದು, ಮಾರಕ ರೋಗಗಳಾದ ಡೆಂಗ್ಯೂ ಮಲೇರಿಯಾದಂತಹ ಕಾಯಿಲೆಗಳು ಹೆಚ್ಚಾಗುತ್ತಿದ್ದು,  ಈಗಾಗಲೇ ಹಲವಾರು ಸಾರ್ವಜನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಂತಹ ನಿದರ್ಶನಗಳಿವೆ.

ಸುಮಾರು ತಿಂಗಳುಗಳಿಂದ ಈ ಅವ್ಯವಸ್ಥೆ ಇದ್ದು, ಇಲ್ಲಿಯವರೆಗೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಾಗಲಿ ಪಂಚಾಯಿತಿಯಾಗಲಿ ಜಿಲ್ಲಾ ಪಂಚಾಯಿತಿಯಾಗಲಿ ಹಾಗೂ ಸ್ಥಳೀಯ ಆಡಳಿತವೇ ಆಗಲಿ ಸ್ಥಳಕ್ಕೆ ಭೇಟಿ ನೀಡಿದ್ದರು ಯಾವುದೇ ದುರಸ್ತಿ ಕಾಣದೆ ಅಭಿವೃದ್ಧಿಯನ್ನು ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದರೆ ತಪ್ಪಾಗಲಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಅಧ್ಯಕ್ಷ ಬಸ್ತಿ ಹಳ್ಳಿ  ರಾಜಣ್ಣ ನೇರವಾಗಿ ಆರೋಪಿಸಿದರು.

ಈ ರಸ್ತೆಯಿಂದ ಈ ಭಾಗದ ವಿದ್ಯಾರ್ಥಿಗಳು, ವಯಸ್ಸಾದವರು, ಸಾರ್ವಜನಿಕರು, ಪ್ರತಿನಿತ್ಯ ನೊಣವಿನಕೆರೆ ಬುರುಡೇಕಟ್ಟೆ ತುರುವೇಕೆರೆ ಹಾಗೂ ತಿಪಟೂರು ಮಾರ್ಗಗಳಿಗೆ ಸಂಚರಿಸುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಹಲವಾರು ಜನ ಈ ರಸ್ತೆಯಲ್ಲಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿರುವ ಘಟನೆಗಳು ಜರುಗಿವೆ.

ಮುಂದೆ ಯಾವುದೇ ಪ್ರಾಣಾಪಾಯವಾಗುವ ಮುಂಚೆ ಗ್ರಾಮ ಪಂಚಾಯಿತಿಯವರು ಎಚ್ಚೆತ್ತುಕೊಂಡು ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿ ಕೊಡಬೇಕೆಂದು ಇದೇ ವೇಳೆಅವರು ಆಗ್ರಹಿಸಿದರು. ಅವರು ಆಗ್ರಹಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos