ಬೆಂಗಳೂರಿನ 6 ಕೆರೆಗಳ ಪುನರುಜ್ಜೀವನ

  • In State
  • March 7, 2019
  • 1283 Views
ಬೆಂಗಳೂರಿನ 6 ಕೆರೆಗಳ ಪುನರುಜ್ಜೀವನ

ಬೆಂಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ನಮ್ಮ ನಗರದ ಬಹುತೇಕ ಕೆರೆಗಳು ಕಲುಷಿತಗೊಂಡು ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವುದನ್ನು ನೋಡುತ್ತೀದ್ದೆವೆ. ಈ ಕೆರೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕಾರ್ಪೊರೇಟ್ ಕಂಪನಿಗಳು ಮುಂದಾಗಿರುವುದು ಸಂತಸದ ವಿಷಯ.

ನಗರದಲ್ಲಿರುವ 6 ಕೆರೆಗಳನ್ನು ಕಾರ್ಪೊರೇಟ್ ಕಂಪನಿ ದತ್ತು ತೆಗೆದುಕೊಂಡಿದ್ದು, ಶೀಘ್ರ ಮರುಜೀವ ನೀಡಲಾಗುತ್ತದೆ.

ಬಯೋಕಾನ್ ಇಂಡಿಯಾ ಖಾಸಗಿ ಸಹಭಾಗಿತ್ವದೊಂದಿಗೆ ಬೊಮ್ಮಸಂದ್ರದ ಬಳಿ ಇರುವ ಯಾರಂಡಹಳ್ಳಿ ಕೆರೆ, ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಮ್ಮಸಂದ್ರ ಕೆರೆಯನ್ನುಇಗಾಗಲೆ ಅಭಿವೃದ್ಧಿಪಡಿಸುತ್ತಿದೆ.

ಎಲೆಕ್ರಾನಿಕ್ಸ್ ಸಿಟಿ ಬಳಿ ಇರುವ ಶಿಕಾರಿಪಾಳ್ಯ ಕೆರೆಯನ್ನು ವಿಪ್ರೋ ಅಭಿವೃದ್ಧಿಪಡಿಸುತ್ತಿದೆ.

ಕೆಂಚೇನಹಳ್ಳಿ ಕೆರೆಯನ್ನು ಮೆರಿಟರ್ ಸಂಸ್ಥೆ, ದೊಡ್ಡತೂಗೂರು ಕೆರೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್, ಮಾರಗೊಂಡನಹಳ್ಳಿ ಕೆರೆಯನ್ನು ಟೈಮ್ಕೆನ್ ಇಂಡಿಯಾ ಕಂಪನಿ ದತ್ತು ತೆಗೆದುಕೊಂಡಿದೆ.

ಮುಂಬರುವ ದಿನಗಳಲ್ಲಿ ಬೆಂಗಳೂರಲ್ಲಿ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಬರುವುದು ಸಂಶಯವಿಲ್ಲ, ಅದಕ್ಕಾಗಿ ಈಗಲೇ ಎಚ್ಚೆತ್ತುಕೊಂಡು ಕೆರೆಯನ್ನು ಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಪರಿವರ್ತಿಸಿಕೊಳ್ಳದಿದ್ದರೆ ಮುಂದೆ ತೊಂದರೆ ನಮಗೇಲ್ಲ ಕಟ್ಟಿಟ್ಟ ಬುತ್ತಿ.

ಇನ್ನು ಹೆಚ್ಚು ಹೆಚ್ಚು ಕಾರ್ಪೊರೇಟ್ ಕಂಪನಿಗಳು ಕೆರೆಗಳ ಅಭಿವೃದ್ಧಿಗೆ ಮುಂದೆ ಬರಬೇಕು. ಬಯೋಕಾನ್ ಹಾಗೂ ವಿಪ್ರೋ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರವು ಶೀಘ್ರದಲ್ಲಿ ಕ್ಲೀನ್ ಏರ್ ಯೋಜನೆಯನ್ನು ಜಾರಿಗೆ ತರುತ್ತದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos