ಬಜೆಟ್ ಮಂಡನೆ ಮಾಡ್ತಿರುವ ದೇಶದ 2ನೇ ಮಹಿಳೆ ನಿರ್ಮಲಾ ಸೀತಾರಾಮನ್

ಬಜೆಟ್ ಮಂಡನೆ ಮಾಡ್ತಿರುವ ದೇಶದ 2ನೇ ಮಹಿಳೆ ನಿರ್ಮಲಾ ಸೀತಾರಾಮನ್

ನವದೆಹಲಿ, ಜು. 5:  ಮೋದಿ ಸರ್ಕಾರದ 2ನೇ ಅವಧಿಯ ಮೊದಲ ಬಜೆಟನ್ನು ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ಮಾಡುತ್ತಿರುವ ದೇಶದ 2ನೇ ಮಹಿಳೆ ನಿರ್ಮಲಾ ಸೀತಾರಾಮನ್.

ನಿರ್ಮಲಾ ಸೀತಾರಾಮನ್ ರಿಗಿಂತ ಮೊದಲು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಕೇಂದ್ರ ಬಜೆಟ್ ಮಂಡನೆ ಮಾಡಿದ್ದರು. ಸುಮಾರು 49 ವರ್ಷಗಳ ಹಿಂದೆ ಇಂದಿರಾ ಗಾಂಧಿ ಬಜೆಟ್ ಮಂಡನೆ ಮಾಡಿದ್ದರು.

ಫೆಬ್ರವರಿ 28, 1970 ರಂದು ಪ್ರಧಾನ ಮಮತ್ರಿ ಹಾಗೂ ವಿತ್ತ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಬಜೆಟ್ ಮಂಡನೆ ಮಾಡಿದ್ದರು. ಮೊದಲ ಭಾಗದಲ್ಲಿ 17 ಅಂಕಗಳು ಮತ್ತು 2ನೇ ಭಾಗದಲ್ಲಿ 38 ಅಂಕಗಳು ಇದ್ದವು. ಇಂದಿರಾ ಗಾಂಧಿ ತಮ್ಮ 15 ಪುಟಗಳ ಬಜೆಟ್ ಮಂಡಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos