ಬಾದಾಮಿ ಎಣ್ಣೆಯ ಹಲವು ಪ್ರಯೋಜನಗಳು

ಬಾದಾಮಿ ಎಣ್ಣೆಯ ಹಲವು ಪ್ರಯೋಜನಗಳು

ಒಣ ಹಣ್ಣುಗಳು ತಮ್ಮ ರುಚಿ ಹಾಗು ಆರೋಗ್ಯಕರವಾದ ಪ್ರಯೋಜನಗಳಿಂದಾಗಿ ಖ್ಯಾತಿಯನ್ನು ಪಡೆದಿವೆ. ಹಾಗಾಗಿ ಪ್ರತಿ ಮನೆಗಳಲ್ಲೂ ಒಣ ಹಣ್ಣುಗಳನ್ನು ಬಳಸುತ್ತಾರೆ. ಅದರಲ್ಲಿಯೂ ಬಾದಾಮಿ ಅಥವಾ ಆಲ್ಮಂಡ್‌ಗೆ ಎಲ್ಲರ ಮನೆಯಲ್ಲಿಯೂ ವಿಶೇಷವಾದ ಸ್ಥಾನ ಮಾನ ಲಭ್ಯವಾಗಿರುತ್ತದೆ.
ನಮ್ಮ ಮನೆಯಲ್ಲಿ ನಮ್ಮ ಹಿರಿಯರಲ್ಲಿ ಒಬ್ಬರಾದರೂ ನಮಗೆ ಪ್ರತಿ ದಿನ ಒಂದು ಹಿಡಿಯಷ್ಟು ಬಾದಾಮಿಗಳನ್ನು ತಿನ್ನಬೇಕು ಎಂದು ಹೇಳುವವರು ಇರುತ್ತಾರೆ. ಬಾದಾಮಿಗಳು ಪ್ರೋಟಿನ್, ಫೈಬರ್, ವಿಟಮಿನ್ ಇ, ಮೆಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಇತ್ಯಾದಿ ಪೋಷಕಾಂಶಗಳು ಇರುತ್ತವೆ.

ಎಣ್ಣೆ (Oil)

ಬಾದಾಮಿಗಳಿಂದ ತೆಗೆದ ಎಣ್ಣೆಯನ್ನು ಬಾದಾಮಿ ಎಣ್ಣೆ ಎಂದು ಕರೆಯುತ್ತಾರೆ. ಇದರಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳು ಇರುತ್ತವೆ. ಈ ಎಣ್ಣೆಯಲ್ಲಿ ವಿಟಮಿನ್ ಇ, ಪ್ರೋಟಿನ್, ಮೊನೊಸ್ಯಾಚುರೇಟೇಡ್ ಕೊಬ್ಬಿನ ಆಮ್ಲಗಳು, ಪೊಟಾಶಿಯಂ ಹಾಗು ಸತು ಜೊತೆಗೆ ಹಲವಾರು ಖನಿಜಾಂಶಗಳು ಮತ್ತು ವಿಟಮಿನ್‌ಗಳು ಇರುತ್ತವೆ. ಇದರಿಂದಾಗಿ ಈ ಎಣ್ಣೆಯು ತ್ವಚೆ, ಕೂದಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆ.

ಈ ಎಣ್ಣೆಯನ್ನು ಎರಡು ಬಗೆಯ ಬಾದಾಮಿಗಳಿಂದ ತೆಗೆಯಲಾಗುತ್ತದೆ. ಅವುಗಳೆಂದರೆ ಒಂದು ಸಿಹಿ ಹಾಗು ಇನ್ನೊಂದು ಕಹಿ ಬಾದಾಮಿಗಳು. ಕಹಿ ಬಾದಾಮಿಗಳನ್ನು ಸೇವಿಸಲಾಗುವುದಿಲ್ಲ, ಏಕೆಂದರೆ ಇದರಲ್ಲಿ ಹೈಡ್ರೊಜೆನ್ ಸೈಯನೈಡ್ ಇರುತ್ತದೆ. ಇದು ವಿಷಕಾರಿಯಾದ ಕಾರಣ ಇದನ್ನು ಸೇವಿಸಲಾಗುವುದಿಲ್ಲ.
ಸಿಹಿ ಬಾದಾಮಿಗಳನ್ನು ನಾವು ಸೇವಿಸುತ್ತೇವೆ. ಈ ಎಣ್ಣೆಯು ಸಿಹಿಯಾಗಿರುತ್ತದೆ.

ಆರೋಗ್ಯಕರ ಪ್ರಯೋಜನಗಳು (Health Benefits)

ತ್ವಚೆಯ ಮೇಲೆ ಲೇಪಿಸಿಕೊಳ್ಳಲು (ಮಸಾಜ್ ಇತ್ಯಾದಿ ರೂಪದಲ್ಲಿ) ಸಿಹಿ ಮತ್ತು ಕಹಿ ಬಾದಾಮಿ ಎರಡೂ ಎಣ್ಣೆಗಳನ್ನು ಬಳಸಲಾಗುತ್ತದೆ. ಏಕೆಂದರೆ ಇವುಗಳಲ್ಲಿ ಒಂದೇ ಬಗೆಯ ಅಂಶಗಳು ಇರುತ್ತವೆ. ಆದರೆ ಸೇವಿಸಲು ನಾವು ಸಿಹಿ ಬಾದಾಮಿಯ ಎಣ್ಣೆಯನ್ನು ಮಾತ್ರ ತೆಗೆದುಕೊಳ್ಳುತ್ತವೆ. ಬಾದಾಮಿ ಎಣ್ಣೆಯಲ್ಲಿರುವ ಕೆಲವೊಂದು ಆರೋಗ್ಯಕರ ಪ್ರಯೋಜನಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಅವು ಯಾವುವೆಂದರೆ:

ಆಂಟಿಆಕ್ಸಿಡೆಂಟ್: ಬಾದಾಮಿ ಎಣ್ಣೆಯಲ್ಲಿ ಸ್ವಲ್ಪ ಪ್ರಮಾಣದ ಆಂಟಿಆಕ್ಸಿಡೆಂಟ್ ಅಂಶಗಳು ಇರುತ್ತವೆ (Antioxidant: Almond oil has mild antioxidant properties)

ಉರಿಯೂತ ನಿರೋಧಕ: ಲೇಪಿಸಿದಾಗ ಹಾಗು
ಸೇವಿಸಿದಾಗ ಬಾದಾಮಿ
ಎಣ್ಣೆಯು ಉರಿಯೂತವನ್ನು ನಿವಾರಿಸುತ್ತದೆ ಎಂದು
ಹೇಳಲಾಗುತ್ತದೆ.

ರೋಗ ನಿರೋಧಕ
ಶಕ್ತಿ ಹೆಚ್ಚಿಸುತ್ತದೆ: ಬಾದಾಮಿ ಎಣ್ಣೆಯು ನಮ್ಮ
ದೇಹದಲ್ಲಿನ ರೋಗ
ನಿರೋಧಕ
ಶಕ್ತಿಯನ್ನು ಹೆಚ್ಚಿಸಿ, ನಮಗೆ
ರೋಗಗಳ
ವಿರುದ್ಧ ಹಾಗು
ಸೋಂಕುಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ: ಇದು
ಮಲವನ್ನು ಸಡಿಲಗೊಳಿಸುತ್ತದೆ. ಆ
ಮೂಲಕ
ನಮ್ಮ
ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು
ಹೇಳಲಾಗುತ್ತದೆ.

ಸ್ಮರಣೆ ಶಕ್ತಿಯನ್ನು
ಹೆಚ್ಚಿಸುತ್ತದೆ: ಬಾದಾಮಿ ಎಣ್ಣೆಯಲ್ಲಿ ಒಮೆಗಾ-3
ಕೊಬ್ಬಿನ ಆಮ್ಲವು
ಇರುತ್ತದೆ ಮತ್ತು
ಉತ್ತಮ
ಪ್ರಮಾಣದಲ್ಲಿ ಪೊಟಾಶಿಯಂ ಇರುತ್ತದೆ. ಇದು
ನರವ್ಯೂಹಕ್ಕೆ ಪೋಷಕಾಂಶವನ್ನು ಒದಗಿಸುತ್ತದೆ.

ಬಿಪಿಯನ್ನು ನಿಯಂತ್ರಿಸುತ್ತದೆ: ಬಾದಾಮಿ ಎಣ್ಣೆಯು ಹೃದಯದ
ಆರೋಗ್ಯಕ್ಕೆ ಒಳ್ಳೆಯದು. ಇದು
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು
ದೇಹದಲ್ಲಿ ಒಳ್ಳೆಯ
ಕೊಲೆಸ್ಟ್ರಾಲ್‌ಗಳ
ಮಟ್ಟವನ್ನು ಕಾಪಾಡಲು ಸಹಾಯ
ಮಾಡುತ್ತದೆ.

ಗರ್ಭಿಣಿಯರಿಗೆ ಒಳ್ಳೆಯದು: ಬಾದಾಮಿ
ಎಣ್ಣೆಯಲ್ಲಿ ಫಾಲಿಕ್
ಆಮ್ಲ
ಇರುತ್ತದೆ. ಇದು
ಆರೋಗ್ಯಕರ ಮಗು
ರೂಪುಗೊಳ್ಳಲು ಹಾಗು
ಬೆಳವಣಿಗೆಯಾಗಲು ಸಹಕರಿಸುತ್ತದೆ.

ಮಲ ವಿರೇಚಕ: ಒಂದು ಲೋಟ ನೀರಿನಲ್ಲಿ ಒಂದೆರಡು ಹನಿ ಬಾದಾಮಿ ಎಣ್ಣೆಯನ್ನು ಸೇವಿಸದರೆ, ಹೊಟ್ಟೆ ಸ್ವಚ್ಛವಾಗಿ ನಮ್ಮ ಜೀರ್ಣಾಂಗ ವ್ಯೂಹವು ಆರೋಗ್ಯಕರವಾಗಿ ಇರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos