ಮೊದಲ ದಿನವೇ ಬಿಗ್ ಬಾಸ್ ಕಂಟೆಸ್ಟೆಂಟ್ ಕಾಲೆಳೆದ ಕಿಚ್ಚ

ಮೊದಲ ದಿನವೇ ಬಿಗ್ ಬಾಸ್ ಕಂಟೆಸ್ಟೆಂಟ್ ಕಾಲೆಳೆದ ಕಿಚ್ಚ

ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕನ್ನಡ ಬಿಗ್ ಬಾಸ್ ಸೀಸನ್ 11 ಈಗಾಗಲೇ ನಿನ್ನೆ (ಭಾನುವಾರ ಸೆ.29) ರಂದು ಸಂಜೆ 6 ಗಂಟೆಯಿಂದ ಗ್ರಾಂಡ್ ಓಪನಿಂಗ್ ಕಂಡಿದ್ದು, ಪ್ರತಿ ಸೀಸನ್ ನಂತೆ ಈ ಸೀಸನ್ ನಲ್ಲಿ ಕೂಡ ಪ್ರತಿಸ್ಪರ್ಧಿಗಳಿಗೆ ನಟ ಸುದೀಪ್ ಅವರು ಅವರ ಪರಿಚಯ ಮತ್ತು ಅವರ ವಿಟಿಗಳನ್ನು ಪ್ಲೇ ಮಾಡಿ ಅವರನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಡುತ್ತಾರೆ.

ಅದರಂತೆ ಈ ಭಾರಿಯೂ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಘಳಿಸಿದವರನ್ನು ಬಿಗ್ ಬಾಸ್ ಮನೆಗೆ ಕರೆ ತರಲಾಗಿದೆ. ಧನರಾಜ್ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಹೆಂಡತಿ ಹಾಗೂ ಕುಟುಂಬದ ಜೊತೆ ಅವರು ರೀಲ್ಸ್ ಮಾಡುತ್ತ ಜನರಿಗೆ ಪರಿಚಿತರಾಗಿದ್ದಾರೆ. ಇನ್ನು ಮೊದಲ ದಿನವೇ ಧನರಾಜ್ ವಿರುದ್ಧ ಸುದೀಪ್ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಮುಡಾ ಕೇಸ್‌; ಮೊದಲನೇ ಹಂತದಲ್ಲಿ ಲೋಕಾಯುಕ್ತ ತನಿಖೆ ಏನು?

ಬಿಗ್ ಬಾಸ್ ಬಗ್ಗೆ ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್​ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋನ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು. ‘ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್​ಪಿಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ’ ಎಂದು ಸುದೀಪ್ ಪ್ರಶ್ನೆ ಮಾಡಿದರು.

ನಾನು ಮಾಡಿರೋದು ತಮಾಷೆಗೆ. ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ ಎಂದು ಧನರಾಜ್ ಕೇಳಿಕೊಂಡರು.

ನಂತರ ನಕ್ಕ ಸುದೀಪ್ ಅವರು ನಾವು ಮಾಡಿದ್ದೆಲ್ಲ ಕೇವಲ ತಮಾಷೆಗಾಗಿ ಎಂದು ವೇದಿಕೆ ಮೇಲೆ ಧನಂಜಯ್ ಅವರ ಕಾಲದಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos