ಹಣಕಾಸು ವಂಚನೆ ವಿರುದ್ಧ ಜಾಗೃತಿ ಅಭಿಯಾನ

ಹಣಕಾಸು ವಂಚನೆ ವಿರುದ್ಧ ಜಾಗೃತಿ ಅಭಿಯಾನ

ಬೆಂಗಳೂರು,ಜ.16: ಫಿನಮೋ ಸಂಸ್ಥೆಯು ಆನ್ ಲೈನ್ ಹಾಗೂ  ಆಫ್ ಲೈನ್ ಮೂಲಕ ಹಣಕಾಸಿನ ವಂಚನೆಗಳ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ‘ಮೋಸಕ್ಕೆ ಹೇಳಿ ಗುಡ್ ಬೈ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿದೆ ಎಂದು  ಹಣಕಾಸು ಮಾಹಿತಿ ಭೋದಕ ಮತ್ತು ಸಂಸ್ಥೆಯ ಸಂಸ್ಥಾಪಕ ಮೋಹನ್ ಕೃಷ್ಣರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಮೂಲಕ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಅಗತ್ಯವಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ವಂಚನೆಗೆ ಸಂಬಂಧಿತ ಪ್ರಶ್ನೆಗಳ ಉತ್ತರ ನೀಡಲು ಬೆಂಗಳೂರಿನಾದ್ಯಂತ 5 ಸ್ಥಳಗಳಲ್ಲಿ ಸಂವಾದಾತ್ಮಕ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ನೇರವಾಗಿ ಹೆಸರು ನೋಂದಾಯಿಸಿಕೊಂಡು ಪ್ರಶ್ನೆ ಉತ್ತರಗಳ  ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅಲ್ಲದೇ ಪ್ರತಿ ಶನಿವಾರ ಮತ್ತು ಭಾನುವಾರ 40 ನಿಮಿಷಗಳ ಕಾಲ ಯೂಟ್ಯೂಬ್ ಮತ್ತು ಫೇಸ್ ಬುಕ್ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಹೆಚ್ಚಿನ‌ ಮಾಹಿತಿಗೆ ಮೋಸಕ್ಕೆ ಹೇಳಿ ಗುಡ್ ಬೈ ವೆಬ್ ಸೈಟ್ ಹಾಗೂ 6364060600ಗೆ ಸಂಪರ್ಕಿಸಲು ಕೋರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos