ಮಾರಕ ರೋಗ ತರಬಲ್ಲ ತಂಬಾಕನ್ನು ದೂರವಿಡಿ

ಮಾರಕ ರೋಗ ತರಬಲ್ಲ ತಂಬಾಕನ್ನು ದೂರವಿಡಿ

ಪಾವಗಡ, ಡಿ. 05: ಮನುಷ್ಯನಿಗೆ ಮಾರಕ ರೋಗ ಕ್ಯಾನ್ಸರ್ ತರಬಲ್ಲ ತಂಬಾಕನ್ನು ದೂರವಿಡಲು ತಂಬಾಕು ಸೇವನೆ ವಿರೋಧಿಸಿ ಪಾವಗಡ ಪಟ್ಟಣದಲ್ಲಿ ಎಸ್ ಎಸ್ ಕೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಜನರಿಗೆ ತಂಬಾಕುವಿನ ದುಷ್ಪಾರಿಣಾಮದ ಬಗ್ಗೆ ಅರಿವು ಮೂಡಿಸಲಾಯಿತು. ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ, ವೃದ್ಧರಿಗೆ ಸಲಹೆ ಸೂಚನೆ ನೀಡುವ ಜಾಗತಿ ಫಲಕಗಳನ್ನು ಹಿಡಿದುಕೊಂಡು ಎಸ್ ಎಸ್ ಕೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮೆರವಣಿಗೆ ನಡೆಸಿದರು.

ಇಂದು ಜಾಗೃತಿ ಜಾಥಾ ನಡೆಸಲಾಯಿತು.  ಎಸ್. ಎಸ್. ಕೆ  ಪದವಿ ಪೂರ್ವ ಕಾಲೇಜಿನ ಶಾಲಾ ವಿದ್ಯಾರ್ಥಿಗಳು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಂಬಾಕು ಸೇವನೆಯಿಂದಾಗಿ ದುಷ್ಪಾರಿಣಾಮದ ಕುರಿತು ವಿದ್ಯಾರ್ಥಿಗಳು ಟೋಲ್ ಗೇಟ್ ಯಿಂದ ಶ್ರೀ ಶನಿ ಮಹಾತ್ಮ ಸರ್ಕಲ್ ವರೆಗೆ  ತಂಬಾಕು ಸೇವನೆಯಿಂದ ದೂರ ಇರಬೇಕೆಂದು ಅರಿವು ಮೂಡಿಸಿದರು.

ಜನತೆ ತಂಬಾಕಿನಿಂದ ಕೂಡಿರುವ ವಸ್ತುಗಳನ್ನು ಸೇವಿಸಿ ಬಲಿಯಾಗಬೇಡಿ. ತಂಬಾಕಿನಿಂದ ಕ್ಯಾನ್ಸರ್ನಂತಹ ಮಾರಕ ರೋಗಗಳು ಆವರಿಸಲಿದ್ದು, ಇದರಿಂದ ಬದುಕೇ ಕತ್ತಲಾಗಲಿದೆ. ತಂಬಾಕು ಸೇವನೆಯಿಂದ ದೂರವಿರಿ,” ಎಂದು ಘೋಷಣೆ ಕೂಗುತ್ತಾ ಜನರಿಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಎಸ್ ಕೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಶಿಕ್ಷಕರು ಹಾಗೂ ಪಾವಗಡ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos