ಕಲಬುರ್ಗಿಯಲ್ಲಿ ಕೊರೊನಾಗೆ ವೃದ್ಧ ಬಲಿ

ಕಲಬುರ್ಗಿಯಲ್ಲಿ ಕೊರೊನಾಗೆ ವೃದ್ಧ ಬಲಿ

ಕಲಬುರ್ಗಿ, ಏ.8 : ನಗರದ ಸಂತ್ರಾಸವಾಡಿಯ ಜಿಡಿಎ  ಬಡಾವಣೆಯ ನಿವಾಸಿಯಾಗಿದ್ದ 67 ವರ್ಷದ ವೃದ್ಧರೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಇಎಸ್ಐಸಿ ಆಸ್ಪತ್ರೆಯಲ್ಲಿ ತಡ ರಾತ್ರಿ ನಿಧನರಾದರು.
ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಗರದ ರಿಂಗ್ ರೋಡ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರಿಂದ ಇಎಸ್ಐಸಿ ಆಸ್ಪತ್ರೆಗೆ ದಾಖಲಿಸಲಾಯಿತು. ರಾತ್ರಿ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದಲೇ ವೃದ್ಧ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.
ಮೆಕ್ಕಾದಿಂದ ಕಲಬುರ್ಗಿಗೆ ವಾಪಸಾಗಿದ್ದ 76 ವರ್ಷದ ವೃದ್ಧರೊಬ್ಬರು ಹೈದರಾಬಾದ್ ನಲ್ಲಿ ಚಿಕಿತ್ಸೆ ಫಲಿಸದೇ ಮಾ 10ರಂದು ನಿಧನರಾಗಿದ್ದರು. ನಂತರ ಪ್ರಯೋಗಾಲಯದ ಫಲಿತಾಂಶದಲ್ಲಿ ಅವರಿಗೆ ಕೋವಿಡ್ 19 ಸೋಂಕಿರುವುದು ದೃಢಪಟ್ಟಿತ್ತು.   ಈಗ ಮತ್ತೊಬ್ಬ ವ್ಯಕ್ತಿ ನಿಧನರಾಗುವುದರೊಂದಿಗೆ ಕಲಬುರ್ಗಿಯಲ್ಲಿ ಕೋವಿಡ್ -19ಗೆ ಬಲಿಯಾದವರ ಸಂಖ್ಯೆ ಎರಡಕ್ಕೇರಿದಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos