68ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅಪ್ಪು ಗುಣಗಾನ.

68ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅಪ್ಪು ಗುಣಗಾನ.

 ಹೊಸಪೇಟೆ: ನಗರದ ಕಮಲಾಪುರ ಪಟ್ಟಣದಲ್ಲಿ ಕನ್ನಡ ಅಭಿಮಾನಿಗಳು ಶ್ರೀ ಕೃಷ್ಣದೇವರಾಯ ಸರ್ಕಲ್ ನಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಆದರ್ಶಗಳನ್ನು ನೆನೆದರು.

ಪೋಲಿಸ್ ಇಲಾಖೆಯ ಎ ಎಸ್ ಐ ತಿಪ್ಪೇಸ್ವಾಮಿ ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು, ಎನ್ನುವ ಪುನೀತ್ ರಾಜಕುಮಾರ್ ಹಾಡನ್ನು, ಹಾಡುವ ಮೂಲಕ ಅವರ ಆದರ್ಶ ಸಿದ್ಧಾಂತಗಳನ್ನು ನಾವು ಕೂಡ ಬೆಳೆಸಿಕೊಳ್ಳಬೇಕು ಮತ್ತು ಅಂತಹ ವ್ಯಕ್ತಿ, ಮತ್ತೊಮ್ಮೆ ಕರ್ನಾಟಕ ರಾಜ್ಯದಲ್ಲಿ ಹುಟ್ಟಿ ಬರಬೇಕು ಕಮಲಾಪುರ ಸರ್ಕಾರಿ ಪ್ರೌಢ ಶಾಲೆಗೆ ಪುನೀತ್ ರಾಜಕುಮಾರ್ 50,000  ಸಹಾಯ ಧನ ನೀಡಿದ್ದಾರೆ ಅದು ನಾವೆಂದೂ ಮರೆಯಬಾರದು ಎಂದು ಹೇಳಿದರು.

ಮಾಜಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಹುಟ್ಟುವಾಗ ಮನುಷ್ಯ ಏನು ತರುವುದಿಲ್ಲ, ಹೋಗುವಾಗ ಏನು ಒಯ್ಯುವುದಿಲ್ಲ ಆದರ ಮಧ್ಯದಲ್ಲಿ ನಾವೇನಾದ್ರೂ ಸಾಧಿಸಬೇಕು. ಹಾಗೆ ನೋಡಿದರೆ ಪುನೀತ್ ರಾಜಕುಮಾರ್ ಒಬ್ಬ ಹೆಸರಾಂತ ಸಾಧಕರ ಸಾಲಿನಲ್ಲಿ ಬರುತ್ತಾರೆ. ಅವರು ಶಿಕ್ಷಣಕ್ಕಾಗಿ ಅಭಯ ಹಸ್ತನೀಡಿ ಅದೆಷ್ಟೋ ಬಡ ಮಕ್ಕಳಿಗೆ ದಾರಿದೀಪವಾಗಿದ್ದಾರೆ ಹಾಗಾಗಿ ಅವರು ಪರಿನಿರ್ವಾಹನ ಹೊಂದಿ ಎರಡು ವರ್ಷ ಕಳೆದರೂ ಕೂಡ ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಹಾಗಾಗಿ ಅವರ ಆದರ್ಶಗಳನ್ನು ನಮ್ಮ ಯುವಕರು ಪಾಲಿಸಬೇಕು ಹಾಗೂ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸಬೇಕು ಎಂದು ಯುವಕರನ್ನು ಉರಿದುಂಬಿಸಿದರು.

ಈ ಸಂದರ್ಭದಲ್ಲಿ ನೂರಾರು ಸಭಿಕರು, ಯುವಕರು ಪುನೀತ್ ರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಾರ್ವಜನಿಕರ ಗಮನವನ್ನು ಸೆಳೆದರು.

ವೇದಿಕೆಯಲ್ಲಿ ಎ ಎಸ್ ಐ ತಿಪ್ಪೇಸ್ವಾಮಿ, ಪುರಸಭೆ ಸದಸ್ಯರು, ಅಧಿಕಾರಿಗಳಾದ ಪತ್ತಾರ್, ಸಿಕಂದರ್, ಊರಿನ ಮುಖಂಡರು ಹಾಗೂ ಪಟ್ಟಣ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಹೆಚ್ ತಿಪ್ಪೇಸ್ವಾಮಿ ಇತರರು ಇದ್ದರು.

ವರದಿಗಾರ, ಎ ಚಿದಾನಂದ,ವಿಜಯನಗರ.

ಫ್ರೆಶ್ ನ್ಯೂಸ್

Latest Posts

Featured Videos