ಕ್ಷಮೆಯಾಚಿಸಿದ ಇರಾನ್.!

ಕ್ಷಮೆಯಾಚಿಸಿದ ಇರಾನ್.!

ಇರಾನ್,ಜ. 12 : ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ವಿಮಾನ ಪತನಕ್ಕೆ ಪತನಗೊಳ್ಳಲು ತಾನೇ ಕಾರಣ ಎಂದು ಇರಾನ್ ವಿದೇಶಾಂಗ ಸಚಿವ ಜಾವೇದ್ ಜರೀಫ್ ಟ್ವೀಟ್ ಮಾಡಿ ಇಂದು ಒಪ್ಪಿಕೊಂಡಿದ್ದಾರೆ.
ಆದರೆ, ಈ ಪತನವು ಮಾನವನ ತಪ್ಪು ಗ್ರಹಿಕೆಯಿಂದ ಹೊಡೆದುರುಳಿಸಲಾಗಿದೆಯೇ ಹೊರತು ಉದ್ದೇಶಪೂರ್ವಕವಾಗಿ ಅಲ್ಲ. ಸೇನೆ ಕೈಗೊಂಡ ಆಂತರಿಕ ತನಿಖೆಯಲ್ಲಿ ಅಮೆರಿಕದ ಸಾಹಸದಿಂದ ಉಂಟಾದ ಬಿಕ್ಕಟ್ಟಿನ ಸಮಯದಲ್ಲಿ ಮಾನವ ದೋಷದಿಂದಾಗಿ ಈ ವಿಪತ್ತು ಸಂಭವಿಸಿರುವುದು ತಿಳಿದಿದೆ ಎಂದಿದ್ದಾರೆ.
ಈ ಅವಘಡದಲ್ಲಿ ಜೀವಹಾನಿಯಾದವರ ಕುಟುಂಬಕ್ಕೆ ಹಾಗೂ ಸಂಬಂಧಿಸಿದ ರಾಷ್ಟ್ರಗಳಿಗೆ ತೀವ್ರ ವಿಷಾಧ ಮತ್ತು ಕ್ಷಮೆ ಕೋರುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ, ಈ ವಿಮಾನ ಪತನದಲ್ಲಿ ಜೀವಹಾನಿಯಾದ ಕುಟುಂಬಗಳಿಗೆ ಇರಾನ್ ಮಿಲಿಟರಿ ಹೇಳಿಕೆಯಲ್ಲಿ ಸಂತಾಪ ಸೂಚಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos