ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ; ತಹಶೀಲ್ದಾರ್ ತೇಜಸ್ವಿನಿ ಭೇಟಿ

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ; ತಹಶೀಲ್ದಾರ್ ತೇಜಸ್ವಿನಿ ಭೇಟಿ

ತುಮಕೂರು, ಮಾ.9, ನ್ಯೂಸ್ ಎಕ್ಸ್ ಪ್ರೆಸ್:  ಅಂತರ್ಜಾತಿ ವಿವಾಹವಾಗಿದ್ದ ಯುವಕನ ಕುಟುಂಬಕ್ಕೆ ಗ್ರಾಮದ ಮುಖಂಡರಿಂದ ಸಾಮಾಜಿಕ ಬಹಿಷ್ಕಾರ ಹಾಕಿದ ಅನಾಗರಿಕ ಪದ್ಧತಿ ತುಮಕೂರು ಜಿಲ್ಲೆಯ ಲಿಂಗಪ್ಪನಪಾಳ್ಯದಲ್ಲಿ ನಡೆದಿದೆ.

ಇಂದು ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರು ಹಾಗೂ

ಗ್ರಾಮದ ಮುಖಂಡರು, ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಜೊತೆ ಸಮಾಲೋಚನೆ ನಡೆಸಿ ಸಂಧಾನ ಮಾಡಿದ್ದಾರೆ.

ಗ್ರಾಮದ ಮುಖಂಡರಿಂದ ಬಹಿಷ್ಕರಕ್ಕೊಳಗಾದ ಮೋಹನ್ ಮನನೊಂದು ಇತ್ತೀಚೆಗೆ ಎಸಿಬಿ ಅಧಿಕಾರಿಯವರ ಗಮನಕ್ಕೆ ತಂದಿದ್ದರು. ತನಿಖೆ ನಡೆಸಿ ವರದಿ ನೀಡಲು ಕಂದಾಯ ಅಧಿಕಾರಿ ಸ್ಥಳೀಯ ಪೋಲಿಸರಿಗೆ ಎಸಿಬಿ ಸೂಚಿಸಿತ್ತು.  ಆದ್ದರಿಂದ ಚಿಕ್ಕನಾಯಕನಹಳ್ಳಿ ತಾಲೂಕು ತಹಶೀಲ್ದಾರ್ ತೇಜಸ್ವಿನಿ ಅವರ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ಸಾಮಾಜಿಕ ಬಹಿಷ್ಕಾರಕ್ಕೆ ಇತಿಶ್ರೀ ಹಾಡಿದ್ದಾರೆ.

ಸಂಧಾನ ಸಭೆ ನಡೆಸಲು ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಗೆ ಕಂದಾಯ ಅಧಿಕಾರಿಗಳು, ಸ್ಥಳೀಯ ಪೋಲಿಸರು ಸಾಥ್‍ ನೀಡಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos