ಮದ್ಯದ ದೊರೆಗೆ ಮತ್ತೊಂದು ಸಂಕಟ

ಮದ್ಯದ ದೊರೆಗೆ ಮತ್ತೊಂದು ಸಂಕಟ

ಜ, 17: ಭಾರತೀಯ ಬ್ಯಾಂಕ್ ಗಳಿಂದ ಸಾಲ ಪಡೆದು ಮರು ಪಾವತಿಸದ ಮದ್ಯದ ದೊರೆ ವಿಜಯ್ ಮಲ್ಯ ಸಂಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಇದೀಗ ದ್ವೀಪವೊಂದರಲ್ಲಿ ಮಲ್ಯ ಒಡೆತನದಲ್ಲಿದ್ದ ಐಷಾರಾಮಿ ಬಂಗಲೆ ಕೂಡ ಕೈತಪ್ಪುವ ಸಾಧ್ಯತೆ ಇದೆ.

ಹೌದು, 2008ರಲ್ಲಿ ದಕ್ಷಿಣ ಆಫ್ರಿಕಾ ಸಮೀಪದ ಲೆ ಗ್ರ್ಯಾಂಡ್ ಜೆರ್ಡೆನ್’ ದ್ವೀಪದಲ್ಲಿ ಹೊಂದಿದ್ದ 30 ದಶಲಕ್ಷ ಡಾಲರ್ ಮೌಲ್ಯದ ಐಷಾರಾಮಿ ಬಂಗಲೆಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಬ್ಯಾಂಕೊಂದು ಕೋರ್ಟ್ ಮೆಟ್ಟಿಲೇರಿದೆ.

ಪ್ರತ್ಯೇಕ ದ್ವೀಪದಲ್ಲಿ ವಿಜಯ್ ಮಲ್ಯ ಹೊಂದಿರುವ ಈ ಐಷಾರಾಮಿ ಬಂಗಲೆಯಲ್ಲಿ 19 ಬೆಡ್ ರೂಮ್ ಗಳಿವೆ. ಸ್ವಂತ ನೆಟ್ ಕ್ಲಬ್, ಖಾಸಗಿ ಹೆಲಿಪ್ಯಾಡ್, ಸಿನಿಮ ಥಿಯೇಟರ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಇದು ಮಲ್ಯ ಅವರ ಅತ್ಯಂತ ಪ್ರಿಯವಾದ ಸ್ಥಳವೂ ಹೌದು ಎನ್ನಲಾಗಿದೆ.

ಬ್ಯಾಂಕ್ ನಿಂದ ಪಡೆದ ಸಾಲ ಮರುಪಾವತಿ ಮಾಡದ ಕಾರಣ ಕತಾರ್ ನ್ಯಾಷನಲ್ ಬ್ಯಾಂಕ್ ನ ಶಾಖೆಯಾಗಿರುವ ಅನ್ಸ್ ಬಾಚರ್ ಅಂಡ್ ಕಂಪನಿ ಬ್ಯಾಂಕ್ ಇದೀಗ ಸಾಲ ಮರುಪಾವತಿಗಾಗಿ ಈ ಬಂಗಲೆ ಹರಾಜು ಹಾಕಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.

ಈಗಾಗಲೇ ಮಲ್ಯ ಇಂಗ್ಲೆಂಡ್ ನಲ್ಲಿರುವ 164 ಅಡಿ ಎತ್ತರದ ಕಟ್ಟಡವೊಂದನ್ನು ಮಾರಿ ಮತ್ತೊಂದು ಬ್ಯಾಂಕ್ ಸಾಲ ತೀರಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಫ್ರೆಶ್ ನ್ಯೂಸ್

Latest Posts

Featured Videos