ಪ್ರಾಚೀನ ಆಯುರ್ವೇದ ವೈದ್ಯ ಪದ್ಧತಿ ಪ್ರಮುಖವಾದದ್ದು

ಪ್ರಾಚೀನ ಆಯುರ್ವೇದ ವೈದ್ಯ ಪದ್ಧತಿ ಪ್ರಮುಖವಾದದ್ದು

ಲೇಪಾಕ್ಷಿ: ಪರಂಪರಾಗತವಾಗಿ ಬಂದ ನಮ್ಮ ಪ್ರಾಚೀನ ವೈದ್ಯ ಪದ್ಧತಿಗಳಲ್ಲಿ ಆರ್ಯುವೇದವೂ ಒಂದು. ಪುರಾಣಗಳಲ್ಲಿ, ವೇದಗಳಲ್ಲಿ ಸಹಾ ಈ ಆರ್ಯುವೇದ ಪದ್ಧತಿ ಬಗ್ಗೆ ಉಲ್ಲೇಖವಿದೆ. ಪ್ರತಿ ಸಸ್ಯದಲ್ಲೂ ಆರ್ಯುವೇದ ಗುಣಗಳಿರುತ್ತೆ. ಆದರೆ ಯಾವ ಸಸ್ಯದಲ್ಲಿ ಯಾವ ರೋಗವನ್ನು ಗುಣಪಡಿಸಬಲ್ಲ ಲಕ್ಷಣಗಳಿವೆ ಎಂದು ತಿಳಿದುಕೊಳ್ಳಬೇಕಾಗಿದೆ.
ರಾಮಾಯಣದಲ್ಲಿ ರಾಮ ರಾವಣ ಕಾಳಗದಲ್ಲಿ ಲಕ್ಷ್ಮಣನು ಮೂರ್ಛೆ ಹೋದಾಗ ಹನುಮಂತನು ಸಂಜೀವಿನಿ ಪರ್ವತವನ್ನು ತಂದ ವಿಷಯ ರಾಮಾಯಣದಲ್ಲಿ ಬರಿಯ ಲಾಗಿದೆ.ಮನುಷ್ಯನು ಜನ್ಮ ತಾಳಿದಾಗಿನಿಂದ ಮೃತ್ಯುವನ್ನು ಅಪ್ಪಕೊಳ್ಳುವವರಿಗೆ ಅನೇಕ ರೋಗ ರುಜಿಗಳಿಗೆ ತುತ್ತಾಗುವುದು ಸಹಜ.
ಇಂತಹ ರೋಗಗಳಿಂದ ಪಾರಾಗಲು ನಮ್ಮ ಪೂರ್ವಜರು ಆಯರ‍್ವೇದ ಪದ್ದತಿ ಯನ್ನು ಮೊರೆ ಹೋಗುತ್ತಿದ್ದರು.ಇಂತಹ ಆಯರ‍್ವೇದ ಚಿಕಿತ್ಸಾ ಪದ್ದತಿ ಮುಖೇನಾ ಜನರ ರೋಗಗಳನ್ನು ಗುಣಪಡಿಸುತ್ತಿದ್ದಾರೆ ಬೆಂಗುಳೂರು ನಗರದ ಹೆಚ್‌ಎಸ್‌ಆರ್ ಲೇಔಟ್ ನಲ್ಲಿರುವ ವಿವೇಕಾನಂದ ಆಯರ‍್ವೇದ ಹೆಲ್ತ್ ಗ್ಲೋಬಲ್ ಆಸ್ಪತ್ರೆ.
ನಮ್ಮ ಪ್ರಾಚೀನ ಮುನಿಗಳಾದ ಚರಕ, ಶುಶ್ರೂಷ, ಮುಂತಾದವರು ತಾಳಪತ್ರಗಳಲ್ಲಿ ಬರದಿಟ್ಟಿದ್ದ ಆಯರ‍್ವೇದ ವೈದ್ಯ ವಿಷಯಗಳೇ ಇಂದಿನ ಆಯರ‍್ವೇದ ಪದ್ದತಿಗಳಿಗೆ ಮೂಲ ಎಂದು ವೈದ್ಯರಾದ ಡಾ.ವಸುಧಾ ಎಂ ಶರ್ಮಾ ಮಾತಾಗಿದೆ.
ಸಾಮಾನ್ಯ ಕಾಯಿಲೆಗಳಾದ ಸಕ್ಕರೇ ಕಾಯಿಲೆ,ರಕ್ತದೊತ್ತಡ,ಮಾನಸಿಕವಾದ ಖಿನ್ನತೆ, ತಲೆನೋವು, ಕೂದಲು ಉದುರುವುದು, ಮುಖದ ಮೇಲಿನ ಮೊಡವೆಗಳನ್ನು ಹೋಗಲಾಡಿಸುವುದು, ಮಹಿಳೆಯರ ಕಾಯಿಲೆಗಳು, ಚರ್ಮವ್ಯಾದಿಗಳು, ಬಂಜಿತನ ಮುಂತಾದ ರೋಗಗಳಿಗೆ ಆಕುಪಂಕ್ಚರ್, ಅರೋಮಾ ಥೆರಫಿ, ಮಸಾಜ್ ಥೆರಫಿ, ಡೈಟ್ ಥೆರಫಿ, ಯೋಗಾ, ಪ್ರಕೃತಿ ಚಿಕಿತ್ಸೆ ಮುಂತಾದ ವೈದ್ಯ ಪದ್ಧತಿಯಿಂದ ಗುಣಪಡಿಸಬಹು ದಾಗಿದೆ. ಕೇಂದ್ರ ರಾಜ್ಯ ಸರ್ಕಾರಗಳು ಈ ವೈದ್ಯ ಪದ್ಧತಿಗಾಗಿ ಬಿಎಎಂಎಸ್ (ಬ್ಯಾಚುಲರ್ ಆಫ್ ಆರ್ಯುವೇದಿಕ್ ಮೆಡಿಕಲ್ ಸೈನ್) ಪದವಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದ್ದಾರೆ. ನಮ್ಮ ಪ್ರಾಚೀನ ವೈದ್ಯ ಪದ್ಧತಿಯನ್ನು ಸಹಾ ಉಳಿಸಿ ಬೆಳಸುವುದೇ ಇಲ್ಲಿನ ಪರಮಾರ್ಥ.
ಸೌಂದರ್ಯ ವರ್ಧನೆಗಾಗಿ ಮುಖಲೇಪನ, ನೇತ್ರಗಳ ವ್ಯಾದಿಗಾಗಿ ನೇತ್ರತರ್ಪಣ, ಕಟಿಬಸ್ತಿ, ಜಾನುಬಸ್ತಿ, ಕುತ್ತಿಗೆ ನೋವಿಗಾಗಿ ಗ್ರೀವಬಸ್ತಿ ಮುಂತಾದ ಚಿಕಿತ್ಸಾ ಪದ್ಧತಿಗಳಿಂದ ರೋಗಗಳನ್ನು ಗುಣಪಡಿಸಬಹುದು ಋಷಿಮುನಿಗಳು ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos