ಕಾಮುಕ ವೈದ್ಯ ಅಂದರ್

ಕಾಮುಕ ವೈದ್ಯ ಅಂದರ್

ಮಂಗಳೂರು, ಜ. 31 : ವೈದ್ಯನೊಬ್ಬ ವೃತ್ತಿಗೆ ಕಳಂಕ ತರುವ ಕೆಲಸ ಮಾಡಿದ್ದಾನೆ. ವೈದ್ಯೋ ನಾರಾಯಣೋಹರಿಃ’ ವೈದ್ಯರು ದೇವರ ಸಮಾನ. ವೈದ್ಯರು ರೋಗಿಗಳಿಗೆ ಚಿಕಿತ್ಸೆಗೂ ಮುನ್ನ ಮೃದುವಾಗಿ ಮಾತನಾಡಿದರೆ ಅರ್ಧ ರೋಗ ವಾಸಿಯಾದಂತೆ. ಕಾಮುಕ ವೈದ್ಯ ಚಿಕಿತ್ಸೆಗೆ ಬಂದಿದ್ದ ಯುವತಿಯ ಗುಪ್ತಾಂಗಗಳನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದವನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯ ಸುಧಾಕರ್ ಬಂಧಿತ ಆರೋಪಿ. 23 ವರ್ಷದ ಯುವತಿಯೊಬ್ಬಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದಳು. ಈ ವೇಳೆ ವೈದ್ಯ ಸುಧಾಕರ್ ಲೈಂಗಿಕ ಕಿರುಕುಳ ನೀಡಿದ್ದ.
ಚಿಕಿತ್ಸೆ ಕೊಡುವ ನೆಪದಲ್ಲಿ ಗುಪ್ತಾಂಗಗಳನ್ನು ಮುಟ್ಟಿ ಕಿರುಕುಳ ನೀಡುತ್ತಿದ್ದ ಡಾಕ್ಟರ್ ಸುಧಾಕರ್ ವಿರುದ್ಧ ಯುವತಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಡಾ.ಸುಧಾಕರ್ನನ್ನು ಬಂಧಿಸಿದ್ದಾರೆ. ಈ ಮೊದಲು ಡಾಕ್ಟರ್ ಸುಧಾಕರ್ ಮೇಲೆ ಇದೆ ರೀತಿಯ ದೂರುಗಳು ಕೇಳಿ ಬಂದಿತ್ತು ಎಂದು ಬಂಧನದ ಬಳಿಕ ಬೆಳಕಿಗೆ ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos