ಅಗ್ಗದ ದರದಲ್ಲಿ ಆಲಿಯಾ ಭಟ್ ಧಿರಿಸು

ಅಗ್ಗದ ದರದಲ್ಲಿ ಆಲಿಯಾ ಭಟ್ ಧಿರಿಸು

ಮುಂಬೈ, ಡಿ. 04: ಬಾಲಿವುಡ್ ಸೆಲೆಬ್ರಿಟಿಗಳು ಸದಾ ತಮ್ಮ ವಿಶಿಷ್ಠ ಉಡುಪಿನ ವಿನ್ಯಾಸನದ ಮೂಲಕವೇ ಗಮನಸೆಳೆಯುತ್ತಾರೆ. ವಿಶೇಷವಾಗಿ ಅವರಿಗಾಗಿಯೇ ವಿನ್ಯಾಸಕರು ರಚಿಸಿರುವ ಈ ಬಟ್ಟೆಗಳ ಮೊತ್ತ ಲಕ್ಷ ಲಕ್ಷ ದಾಟಿದರೂ ಅಚ್ಚರಿ ಪಡಬೇಕಾಗಿಲ್ಲ. ಅದೇ ರೀತಿ ಇತ್ತೀಚೆಗೆ ನಟಿ ಆಲಿಯಾ ಭಟ್ ತೊಟ್ಟ ಬಟ್ಟೆ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

ಹೌದು, ಮುಂಬೈನಲ್ಲಿ ನಡೆದ ಹೋಟೆಲ್ ಒಂದರ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಸಿಂಪಲ್ ಲುಕ್‌ನಲ್ಲಿ ಎಲ್ಲರ ಮನಸೆಳೆದಿದ್ದರು.  ಬಿಳಿ ಪ್ಯಾಂಟ್ ಶರ್ಟ್ ತೊಟ್ಟ ಅವರ ಉಡುಪು ಎಲ್ಲರ ಗಮನಸೆಳೆದಿತ್ತು, ನಡುವಿಗೆ ರೇಷ್ಮೆ ಬಟ್ಟೆಯ  ತಿಳಿ ಗುಲಾಬಿ ಬಣ್ಣದ  ಫ್ರಿಲ್ಸ್ ಬಟ್ಟೆ ಸುತ್ತಿದ ಬಟ್ಟೆ ಎಲ್ಲರ ಗಮನಸೆಳೆದಿತ್ತು.

ಇವರ ಈ ವಿಶಿಷ್ಟ ಉಡುಗೆಗೆ ತಕ್ಕಂತೆ ತಿಳಿ ಗುಲಾಬಿ ಶೂ ತೊಟ್ಟಿದ್ದರು. ಇವರ ಈ ವಿಶಿಷ್ಟ ವಿನ್ಯಾಸದ ಉಡುಪಿನ ಬೆಲೆ ಕೇವಲ 2.990 ಅಂತೆ. ಬಾಲಿವುಡ್ ನಟಿಯಾದರೂ ಇಷ್ಟು ಕಡಿಮೆ ಬಜೆಟ್‌ನಲ್ಲಿ ತಮ್ಮ ಉಡುಪು ವಿನ್ಯಾಸ ಮಾಡಿಸಿದ್ದಾರೆ ಎಂಬ ಮೆಚ್ಚುಗೆಗೆ ಈಗ ನಟಿ ಆಲಿಯಾ ಪಾತ್ರರಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos