ಕೇರಳದ ಅಲ್ಲೆಪ್ಪಿ ಒಮ್ಮೆಯಾದರು ನೋಡಿ..!

ಕೇರಳದ ಅಲ್ಲೆಪ್ಪಿ ಒಮ್ಮೆಯಾದರು ನೋಡಿ..!

ಕೇರಳ, ನ. 29 : ಕೇರಳವನ್ನು ದೇವರ ನಾಡು ಎಂದು ಎಂದು ಕರೆಯುತ್ತಾರೆ. ಕೇರಳ ತನ್ನ ಶ್ರೀಮಂತವಾದ ತಾಣವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ದೇಶದಲ್ಲಿಯೇ ಅಲ್ಲದೇ ವಿದೇಶದಲ್ಲಿಯೂ ಕೂಡ ಪ್ರವಾಸಿಗರ ಗಮನ ಸೆಳೆದಿರುವ ಅದ್ಭುತವಾದ ತಾಣವನ್ನು ಕೇರಳ ಹೊಂದಿದೆ. ಇಲ್ಲಿ ಎತ್ತರವಾದ ಪರ್ವತಗಳು, ವಾಣಿಜ್ಯ ನಗರಗಳು, ಬೀಚ್ಗಳನ್ನು ಕಂಡು ಆನಂದಿಸಬಹುದಾಗಿದೆ. ಕೇರಳದ ಸಮೃದ್ಧವಾದ ಸಂಸ್ಕøತಿ ಮತು ಪರಂಪರೆಯು ಪ್ರಪಂಚದಾದ್ಯಂತ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಕೇರಳದ ಶ್ರೀಮಂತವಾದ ಪ್ರವಾಸಿ ತಾಣಗಳನ್ನು ಅಲ್ಲೆಪ್ಪಿ ಕೇರಳದ ಅತ್ಯುತ್ತಮವಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಅಲೆಪ್ಪಿ ಕೂಡ ಒಂದು. ಇದರ ಹಿನ್ನೀರಿನ ಪ್ರವಾಸಗಳು, ದೋಣಿಮನೆ ತಂಗುವಿಕೆಗಳು ಮತ್ತು ಪ್ರಶಾಂತವಾದ ವಾತಾವರಣ ಇವೆಲ್ಲವೂ ಅಲ್ಲೆಪ್ಪಿಯ ಸೌಂದರ್ಯವಾಗಿದೆ. ನೀರಿನಿಂದ ತುಂಬಿತುಳುಕುತ್ತಿರುವ ಈ ಪ್ರದೇಶದಲ್ಲಿ ಭೇಟಿ ನೀಡಿ, ದೋಣಿ ವಿಹಾರ ಮಾಡಬೇಕು ಎಂದು ಅನ್ನಿಸದೇ ಇರದು.
ಮನ್ನಾರ್
ಕೇರಳದ ಗಿರಿಧಾಮಗಳಲ್ಲಿ ಅತ್ಯಂತ ಜನಪ್ರಿಯವಾದ ತಾಣವೆಂದರೆ ಅದು ಮುನ್ನಾರ್. ಕೇರಳಗೆ ಭೇಟಿ ಅತಿ ಹೆಚ್ಚಾಗಿ ಭೇಟಿ ನೀಡುವ ತಾಣಗಳಲ್ಲಿ ಇದು ಕೂಡ ಒಂದಾಗಿದೆ. ಇಲ್ಲಿ ಹೆಚ್ಚಾಗಿ ಚಹಾದ ಎಸ್ಟೇಟ್ಗಳನ್ನು ಕಣ್ಣುತುಂಬಿಕೊಳ್ಳಬಹುದು. ಸುಮಾರು 80,000 ಕಿ.ಮೀ ದೂರದಷ್ಟು ಚಹಾ ತೋಟ ಇಲ್ಲಿದೆ. ಇಲ್ಲಿ ಹೆಚ್ಚಾಗಿ ನವ ದಂಪತಿಗಳು ಭೇಟಿ ನೀಡುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos