“ಆಲ್ಕೋ ಲಾಕ್“

“ಆಲ್ಕೋ ಲಾಕ್“

ಬೆಂಗಳೂರು, ನ. 11: ಮದ್ಯಪಾನ ಮಾಡಿ ವಾಹನ ಚಲಾಯಿಸುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು “ಅಲ್ಕೋ ಲಾಕ್” ಎಂಬ ಉಪಕರಣವನ್ನು ಅನ್ವೇಶಣೆ ಮಾಡಲಾಗಿದೆ ಎಂದರು. ಈ ಉಪಕರಣವು ಮಹಿಳೆಯರು, ಮಕ್ಕಳು, ಪಾಲಕರು, ವಾಹನ ಮಾಲಿಕರಲ್ಲಿ ನೆಮ್ಮದಿ ನಿಟ್ಟಿಸುರು ಬಿಡುವಂತೆ ಮಾಡಿದೆ ಎಂದು ಸಂಸ್ಥೆಯ ಸಿಇಒ ಶ್ರೀರಾಮ ಹೇಳಿದರು.

ನಗರದ ಪ್ರೆಸ್ ಕ್ಲಬ್ ನ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು  ಈ ಉಪಕರಣವನ್ನು ದೇಶಿಯವಾಗಿ ಅನ್ವೇಶಣ ಮಾಡಿದ್ದು ವಿಜಯವಾಡದ ರಾಮ್ ನಾಥ್ ಮಂಡಳಿ. ಬೈಯಡ್ ಆಟೋ ಟೆಕ್ನಾಲಜಿಸ್ ಪ್ರೈವೈಟ್ ಲಿಮಿಟೆಡ್ ನ  ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಸತತ ಹದಿನೈದು ವರ್ಷಗಳ ಪರಿಶ್ರಮ ಹಾಗೂ ಸಂಶೋದನೆ ಅಭಿವೃದ್ಧಿ ಮೂಲಕ ಜನರಿಗೆ ಅನೂಕಲವಾಗುವ ರೀತಿಯಲ್ಲಿ ಈ ಉಪಕರಣವನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.

“ಆಲ್ಕೋ ಲಾಕ್“ ಇದನ್ನು ನಾಲ್ಕು ಚಕ್ರಗಳ ಯಾವುದೇ ವಾಹನಗಳಿಗೆ ಅಳವಡಿಸಬಹುದಾಗಿದೆ. ಮದ್ಯಪಾನದ ಪ್ರಮಾಣವನ್ನು ಉಸಿರಾಟದ ಮೂಲಕ ಅಳೆಯಲಾಗುತ್ತದೆ.  ಪ್ರತಿಬಾರಿ ವಾಹನ ಚಾಲನೆ ಮಾಡುವ ಮುನ್ನ ವಾಹನ ಚಾಲಕರು ಜೋರಾಗಿ ಈ ಉಪಕರಣದ ಮುಂದೆ ಊದಬೇಕಾಗುತ್ತದೆ. ಹಾಲ್ಕೋಹಾಲ್ ಪ್ರಮಾಣ ನಿರ್ದಿಷ್ಟ ಪರಿಮಿತಿಗಿಂತ ಹೆಚ್ಚಾಗಿದ್ದರೆ ವಾಹನ ಚಾಲೂ ಆಗುವುದಿಲ್ಲ. ಅಂತಹ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ನೇರವಾಗಿ ವಾಹನದ ಇಗ್ನಿಷನ್ ಗೆ ಸಂಪರ್ಕ ಕಲ್ಪಿಸಿ ಈ ಉಪಕರಣ ಅಳವಡಿಸಲಾಗುತ್ತದೆ.

ಹಾಲ್ಕೋಹಾಲ್ ಪ್ರಮಾಣ ಹೆಚ್ಚಾಗಿದ್ದರೆ ಏನೇ ಮಾಡಿದರೂ ವಾಹನ ಚಾಲನೆಗೊಳ್ಳುವುದಿಲ್ಲ. ಮದ್ಯಪಾನ ಮಾಡಿರುವುದು ಗೊತ್ತಾದರೆ ವಾಹನ ಚಾಲೂ ಆಗದಂತೆ ಆಂತರಿಕವಾಗಿ ಲಾಕ್ ಆಗುವ ಕೇಂದ್ರೀಕೃತ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮದ್ಯಪಾನ ಮಾಡದೇ ಇರುವವವರು ಬಂದು ವಾಹನ ಚಾಲನೆ ಮಾಡಿಕೊಂಡು ಹೋಗಬೇಕಾಗುತ್ತದೆ.

ಮತ್ತೊಂದು ಕುತೂಹಲದ ಸಂಗತಿ ಎಂದರೆ ವಾಹನ ಚಾಲೂ ಮಾಡಿದ ನಂತರ ಚಾಲನೆ ಮಾಡುತ್ತಲೇ ವಾಹನದಲ್ಲೇ ಮದ್ಯ ಸೇವಿಸಲು ಆರಂಭಿಸಿದರೆ ಎನ್ನುವ ಸಂದೇಹ ಸಹಜ. ನಮ್ಮ ಉಸಿರಾಟದಲ್ಲಿ ಆಲ್ಕೋಹಾಲ್ ಪ್ರಮಾಣವನ್ನು ಗಮನಿಸಿ ಪರಿಮಿತಿಗಿಂತ ಹೆಚ್ಚು ಮದ್ಯ ಸೇವಿಸಿದರೆ ಸ್ವಲ್ಪ ಸಮಯದ ನಂತರ ವಾಹನದ ಇಂಜಿನ್ ಆಫ್ ಆಗಲಿದೆ. ಆಗ “ ಆಲ್ಕೋ ಲಾಕ್ “  ಉಪಕರಣದ ಮುಂದೆ ಊದುವಂತೆ ಸೂಚಿಸುತ್ತದೆ. ಚಾಲಕರಿಗೆ ಗೊತ್ತಲ್ಲದಂತೆ ಸ್ಪೈ ಕ್ಯಾಮರಾವನ್ನು ಸಹ ಇದು ಒಳಗೊಂಡಿದೆ..

ಪ್ರಮುಖವಾಗಿ ನಾಡಿನ ಸಂಚಾರಿ ವ್ಯವಸ್ಥೆಯ ಜೀವನಾಡಿ ಕೆ.ಎಸ್.ಆರ್.ಟಿ.ಸಿ., ಬಿಎಂಟಿಸಿಯತಹ ಸಾರಿಗೆ ಸಂಸ್ಥೆಗಳ ವಾಹನಗಳಿಗೆ ಇಂತಹ ಉಪಕರಣ ಅಳವಡಿಸುವ ಅಗತ್ಯತೆ ಅತ್ಯಂತ ಹೆಚ್ಚಾಗಿದೆ. ಇದರಿಂದ ಅಮಾಯಕ ಜೀವಗಳನ್ನು ರಕ್ಷಿಸಲು ಸಹಕಾರಿಯಾಗುತ್ತದೆ. ಇನ್ನು ಟ್ರಾವೆಲ್ ಏಜೆನ್ಸಿಗಳು, ಟ್ರಕ್ ಗಳು, ಸಾರಿಗೆ ವಾಹನಗಳು, ಶಾಲಾ ಮಕ್ಕಗಳನ್ನು ಕರೆದೊಯ್ಯುವ ವಾಹನಗಳು, ಮಕ್ಕಳು, ಕುಟುಂಬ ಸದಸ್ಯರ ಮೇಲೆ ನಿಗಾ ಇಡಲು ಈ ಉಪಕರಣ ಅತ್ಯಂತ ಉಪಯುಕ್ತವಾಗಿದೆ. ಎಂದು ಹೇಳಿದರು.

 

 

 

 

ಫ್ರೆಶ್ ನ್ಯೂಸ್

Latest Posts

Featured Videos