ಏರ್ಪೋಟ್ ನಲ್ಲಿ ಕಲರ್ ಫುಲ್ ಗೊಂಬೆಗಳ ಕಲರವ

ಏರ್ಪೋಟ್ ನಲ್ಲಿ ಕಲರ್ ಫುಲ್ ಗೊಂಬೆಗಳ ಕಲರವ

ದೇವನಹಳ್ಳಿ, ಅ. 2: ದಸರಾ ಅಂದ್ರೆ ಸಾಕು ನಮಗೆ ತಟ್ ಅಂತಾ ನೆನಪಾಗೋದು ಮೈಸೂರು. ಇನ್ನೂ ಪ್ರತಿವರ್ಷ ಮೈಸೂರಿನ ವಿಶ್ವ ವಿಖ್ಯಾತ ಜಂಬೂ ಸವಾರಿಯನ್ನ ವೀಕ್ಷಿಸಲೆಂದು ದೇಶ ವಿದೇಶಗಳಿಂದ ಜನ ಬರ್ತಾರೆ. ಈ ರೀತಿ ಬರೂ ಅಂತರಾಜ್ಯ ಪ್ರಯಾಣಿಕರಿಗೆಂದು ಕೆಂಪೇಗೌಡ ಅಂತರಾಷ್ಟ್ರೀಯಾ ವಿಮಾನ ನಿಲ್ಥಾಣದಲ್ಲಿ ಜಂಬೂ ಸವಾರಿ ಹಾಗೂ ಗೊಂಬೆಗಳನ್ನ ಪ್ರದರ್ಶನ ಸೇರಿದಂತೆ ಸಂಗೀತ ರಸಸಂಜೆಯನ್ನ ಏರ್ಪಡಿಸಲಾಗಿದೆ. ಅಲ್ಲದೆ ದೇಶ ವಿದೇಶಿಗರನ್ನ ಏರ್ಪೋಟ್ ತನ್ನತ ಆಕರ್ಷಿಸುತ್ತಿದೆ,

ಏರ್ಪೋಟ್ ಆವರಣದಲ್ಲಿ ಅಂಬಾರಿಯನ್ನ ಹೊತ್ತು ನಿಂತಿರೋ ಆನೆ…..ಮೈಸೂರು ದಸರಾ ನೆನಪಿಸುವಂತಹ ಆನೆಯನ್ನ ಕಣ್ತುಂಬಿಕೊಂಡು ಸಾಗ್ತಿರೋ ಪ್ರಯಾಣಿಕರು…. ಮತ್ತೊಂದುಕಡೆ ಸುಗಮ ಸಂಗೀತದಿಂದ ಪ್ರಯಾಣಿಕರನ್ನ ರಂಜಿಸುತ್ತಿರೂ ಗಾಯಕರು,….ದಸರಾ ಗೊಂಬೆಗಳ ಸಾಂಸ್ಕೃತೀಕ ಅನಾವರಣ…. ಹೌದು, ಈ ಎಲ್ಲಾ ದೃಶ್ಯಗಳೆಲ್ಲ ಕಂಡು ಬಂದಿದ್ದು, ನಮ್ಮ

ಕೆಂಪೇಗೌಡ ಅಂತರಾಷ್ಟ್ರೀಯಾ ವಿಮಾನ ನಿಲ್ಥಾಣದಲ್ಲಿ.

ಮೈಸೂರು ಸೇರಿದಂತೆ ನಾಡಿನಾಧ್ಯಂತ ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನ ಆಚರಿಸಲಾಗುತ್ತಿದೆ. ಅದೇ ರೀತಿ ಕೆಐಎಎಲ್‌ ನಲ್ಲಿ ಕೂಡ ದೇಶ ವಿದೇಶದ ಪ್ರಯಾಣಿಕರಿಗೆ ದಸರಾ ವೈಭವವನ್ನ ಪರಿಚಯಿಸೋ ನಿಟ್ಟಿನ

ಲ್ಲಿ ಏರ್ಪೋಟ್ ಆಡಳಿತ ಮಂಡಳಿ ಏರ್ಪೋಟ್ ಆವರಣದಲ್ಲಿ 3 ದಿನಗಳ ಕಾಲ ದಸರಾ ಉತ್ಸವವನ್ನ ಆಯೋಜಿಸಿದೆ. ಹೀಗಾಗಿ ಏರ್ಪೋಟ್ ನ ದಸರಾ ಉತ್ಸವಕ್ಕೆ ಬೇಟಿ ನೀಡಿದ ಸರ್ಕಾರ ಮುಖ್ಯ ಕಾರ್ಯದರ್ಶಿ ವಿಜಯ್ ಬಾಸ್ಕರ್ ಏರ್ಪೋಟ್ ಟರ್ಮಿನಲ್ ಆವರಣದಲ್ಲಿ ಹಾಕಿದ್ದ ಕಲರ್ ಫುಲ್ ಸೆಟ್ನಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

ಇನ್ನೂ ನಮ್ಮ ಕಲೆ, ಸಂಸ್ಕೃತಿ, ದಸರಾ ವೈಭವವನ್ನ ಎಲ್ಲೆಡೆ ಸಾರಲು ಪ್ರತಿವರ್ಷ ಕಾರ್ಯಕ್ರಮವನ್ನ ಆಯೋಜಿಸಲಾಗುತ್ತೆ ಅಂತಾ ಕೆಐಎಎಲ್‌ನ ಉಪಾದ್ಯಕ್ಷ ವೆಂಕಟರಮಣ ತಿಳಿಸಿದರು.

ಇನ್ನೂ ಏರ್ಪೋಟ್ ನಿಂದ ದೇಶ ವಿದೇಶಗಳಿಗೆ ಪ್ರಯಾಣಿಸೂ ಪ್ರಯಾಣಿಕರಿಗೆ ಮೈಸೂರು ದಸರಾ ಉತ್ಸವವನ್ನ ಪರಿಚಯಿಸೂ ನಿಟ್ಟಿನಲ್ಲಿ ರಸಸಂಜೆ ಕಾರ್ಯಕ್ರಮಗಾಳದ ಭರತ್ನಾಟ್ಯ ಸಂಗೀತ ಮತ್ತು ಕ್ಲಾಸಿಕ್ ಡ್ಯಾನ್ಸಗಳು ಸೇರಿದಂತೆ ಸಾಂಸ್ಕೃತೀಕ ಶ್ರೀಮಂತಿಕೆಯ ಕಲೆಗಳ ಅರ್ಥಪೂರ್ಣ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದ್ದು, 3 ದಿನಗಳ ಕಾಲ ಪ್ರಯಾಣಿಕರನ್ನ ರಂಜಿಸಲಿವೆ. ಜತೆಗೆ ಟರ್ಮಿನಲ್ ಆವರಣದಲ್ಲಿ ರಾಜ ಅಂಬಾರಿ ಹೊತ್ತು ಸಾಗ್ತಿರೋ ಆನೆಯ ದರ್ಬಾರ್, ಋಷಿ ಮುನಿಗಳ ತಪಸ್ಸು, ರಾವಣನ ಅವಾತರಗಳ ಗೊಂಬೆಗಳು ಸೇರಿದಂತೆ ಪ್ರಾಚೀನ ಕಾಲದ ಗತವೈಭವವನ್ನ ನೆನಪಿಸೋ ಗೊಂಬೆಗಳನ್ನ ಪ್ರದರ್ಶಿಸಿದ್ದಾರೆ. ಇನ್ನೂ ಏರ್ಪೋಟ್  ಆವರಣದಲ್ಲಿ ಆಯೋಜಿಸಿದ್ದ ಗೊಂಬೆಗಳನ್ನ ಕಂಡು ಫುಲ್ ಖುಷಿಯಾದ ಪ್ರಯಾಣಿಕರು. ಗತಕಾಲದ ಇತಿಹಾಸ ಹೆಳುವ ಗೊಂಬೆಗಳ ಮುಂದೆ ನಿಂತು ಸೆಲ್ವಿ ತೆಗೆದುಕೊಳ್ಳುವ ಮುಖಾಂತರ ಏರ್ಪೋಟ್ ಆವರಣದಲ್ಲಿ ದಸರಾ ಉತ್ಸವವನ್ನ ಫುಲ್ ಕಣ್ತುಂಬಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos