ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

ಚನ್ನೈ, ನ. 22 : ಖ್ಯಾತ ತಮಿಳು ನಟ ಕಮಲ್ ಹಾಸನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಬಲಗಾಲಿನ ಮೂಳೆ ಮುರಿದ ಹಿನ್ನಲೆ ಕಾಲಿಗೆ ಕಸಿ(ಪಟ್ಟು)ಹಾಕಲಾಗಿತ್ತು. ಕಸಿ ತೆಗೆಯುವುದಕ್ಕಾಗಿ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಒಂದೆರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಎಂಎನ್ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ತಿಳಿಸಿದ್ದಾರೆ.

ಬಾಲನಟನಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಕಮಲ್ ತಮ್ಮ ನಟನೆ, ಬರವಣಿಗೆ, ಗಾಯನ, ನಿರ್ದೇಶನ ಮತ್ತು ನಿರ್ಮಾಣ ಕೌಶಲಗಳಿಂದ ಹೆಸರು ಮಾಡಿದ್ದಾರೆ. ಆ ಕಾರಣಕ್ಕೆ ಅವರು ಯುನಿವರ್ಸಲ್ ಸ್ಟಾರ್ ಎಂದು ಖ್ಯಾತಿ ಪಡೆದಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos