ಆಚಾರ್ಯಶ್ರೀ ಮಹಾಶ್ರಮಣಜಿ ಪುರಪ್ರವೇಶ

ಆಚಾರ್ಯಶ್ರೀ ಮಹಾಶ್ರಮಣಜಿ ಪುರಪ್ರವೇಶ

ಹುಬ್ಬಳ್ಳಿ, ಜ. 23:  ನಗರದಲ್ಲಿ ಜ. 23ರಿಂದ ಫೆ. 1ರವರೆಗೆ ನಡೆಯಲಿರುವ ಮರ್ಯಾದಾ ಮಹೋತ್ಸವ ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಲಿರುವ, ದೇಶದ 19 ರಾಜ್ಯಗಳಲ್ಲಿ ಅಹಿಂಸಾ ಪಾದಯಾತ್ರೆ ಕೈಗೊಂಡಿರುವ ಆಚಾರ್ಯ ಶ್ರೀ ಮಹಾಶ್ರಮಣಜಿ ಬುಧವಾರ ಪುರಪ್ರವೇಶ ಮಾಡಿದರು.

ಆಚಾರ್ಯ ಶ್ರೀ ಮಹಾಶ್ರಮಣಜಿ ಹಾಗೂ ಅವರೊಂದಿಗಿದ್ದ ಸುಮಾರು 270 ಜನ ಇಲ್ಲಿನ ಗದಗ ರಸ್ತೆಯಲ್ಲಿ ನೂರಾರು ಶ್ರಾವಕ-ಶ್ರಾವಕಿಯರು ಬರಮಾಡಿಕೊಂಡರು.

ನಂತರ ದುರ್ಗದಬೈಲ್​ನಲ್ಲಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಅವಳಿ ನಗರದ ನಾಗರಿಕರ ಪರವಾಗಿ ಶ್ರೀಗಳನ್ನು ಸ್ವಾಗತಿಸಿದರು. ಕಂಚಗಾರ ಗಲ್ಲಿ ಮಹಾವೀರ ಭವನ, ಶಾಂತಿನಾಥ ಮಂದಿರದ ಮೂಲಕ ಶ್ರೀಗಳು ಘಂಟಿಕೇರಿಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಗೆ ತೆರಳಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಆಚಾರ್ಯ ಶ್ರೀ ಮಹಾಶ್ರಮಣಜಿ, ಅಹಂಕಾರ ತೊರೆದು ಮಾನವೀಯತೆ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರತಿಯೊಬ್ಬರೂ ಕೇವಲ ಜ್ಞಾನ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರಾಣಿಗಳನ್ನು ಪ್ರೀತಿಸಬೇಕು. ಸ್ನೇಹಪರ ಗುಣ ಹೊಂದಬೇಕು. ಸ್ನೇಹದಿಂದ ಶತ್ರುತ್ವ ದೂರವಾಗಿ ಸಂಬಂಧಗಳು ಬೆಸೆಯುತ್ತವೆ. ವಿನಾಶಕಾರಿ ಜ್ಞಾನವನ್ನು ಎಂದೆಂದಿಗೂ ಬಳಸಬಾರದು. ಅಹಿಂಸಾ ತತ್ತ್ವ ಪರಿಪಾಲಿಸಬೇಕು ಎಂದು ತಿಳಿಸಿದರು.

ಮರ್ಯಾದಾ ಮಹೋತ್ಸವ ಸಮಿತಿ ಅಧ್ಯಕ್ಷ ಸೋಹನಲಾಲ ಕೊಠಾರಿ, ಜೈನ್ ಶ್ವೇತಾಂಬರ ತೇರಾಪಂಥ ಸಮಾಜದ ಪ್ರಮುಖರಾದ ಭರತ ಭಂಡಾರಿ, ಮಹೇಂದ್ರ ಪಾಲ್ಗೋತಾ, ಚಂದನಲಾಲ, ಪುರಣ ನಾಟ, ಜವಾಹರ ಜೈನ್, ದಿನೇಶ ಜೈನ್, ಮಹೇಂದ್ರ ಜೈನ್, ಮಹೇಂದ್ರ ಸಿಂಘಿ, ವಿವೇಕ ಶಾ, ಭರತ ಜೈನ, ರಾವತಮಲ್ ಜೈನ್, ಫುಖರಾಜ ಸಿಂಗವಿ, ಬ್ರಹ್ಮಕುಮಾರ ಬೀಳಗಿ, ಪಾರಸಮಲ್ ಬಾಫಣಾ, ರತನ ಬಾಗ್ರೇಚಾ ಮತ್ತಿತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos