ಮರಾಠಿಯತ್ತ ಅದಿತಿ ಪ್ರಭುದೇವ!

ಮರಾಠಿಯತ್ತ ಅದಿತಿ ಪ್ರಭುದೇವ!

ಬೆಂಗಳೂರು, ಜ. 21: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ನಟಿಯರಲ್ಲಿ ಅದಿತಿ ಪ್ರಭುದೇವ ಕೂಡ ಒಬ್ಬರು. ಇವರಿಗೆ ಸಾಲುಗಟ್ಟಲೆ ನಟಿಸಲು ಮೇಲಿಂದಮೇಲೆ ಅವಕಾಶಗಳು ಸಿಗುತ್ತಿವೆ.

ಇತ್ತೀಚಿಗೆ ಬಿಡುಗಡೆಯಾದ ಬ್ರಹ್ಮಾಚಾರಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅದಿತಿ ಪ್ರಭುದೇವ ಈಗ ಮರಾಠಿಯಲ್ಲಿ ಬರುತ್ತಿರುವ ಚ್ಯಾಂಪಿಯನ್ ಸಿನಿಮಾಗೆ ಸಹಿ ಮಾಡಿದ್ದಾರೆ.

ಹೌದು, ಸಾಹುರಾಜ್ ಶಿಂಧೆ ನಿರ್ದೇಶನದ ಈ ಸಿನಿಮಾದಲ್ಲಿ ಸಚಿನ್ ಧನ್ ಫಾಲ್ ಗೆ ಅದಿತಿ ನಾಯಕಿಯಾಗಿದ್ದಾರೆ. ಇಬ್ಬರು ಎಂಜಿನೀಯರಿಂಗ್ ವಿದ್ಯಾರ್ಥಿಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ಪೋರ್ಟ್ಸ್ ಕಥೆ ಇದಾಗಿದೆ. ಜೊತೆಗೆ ಪ್ರೀತಿ ಮತ್ತು ಕಾಮಿಡಿ ಕಥೆಯೂ ಇದೆ.

‘ಅದಿತಿ ಇಲ್ಲಿ ಸಂಪ್ರದಾಯಸ್ಥ ಮನೆತನದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ ದೇವರಾಜ್, ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ, ಸುಮನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ’ ಎನ್ನುತ್ತಾರೆ ಶಿಂಧೆ.

ವಿಶೇಷವೆಂದರೆ, ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಮರಾಠಿ ಭಾಷೆಯಲ್ಲೂ ಮೂಡಿಬರಲಿದೆ. ಹಾಗಂತ ಕನ್ನಡ ಚಿತ್ರವನ್ನು ಮರಾಠಿಗೆ ಡಬ್ ಮಾಡುತ್ತಿಲ್ಲ. ಬದಲಿಗೆ ಮರಾಠಿಯಲ್ಲಿ ಪ್ರತ್ಯೇಕವಾಗಿ ಶೂಟಿಂಗ್ ನಡೆಸಲಾಗವುದು. ಮರಾಠಿಯಲ್ಲಿ ಹೀರೋ ಸಚಿನ್ ಮಾತ್ರ ಇರಲಿದ್ದು, ಉಳಿದ ಪಾತ್ರವರ್ಗವೆಲ್ಲ ಪ್ರತ್ಯೇಕವಾಗಿರುತ್ತದೆ. ಆ ಪಾತ್ರಧಾರಿಗಳ ಆಯ್ಕೆ ಇನ್ನಷ್ಟೇ ಆಗಬೇಕಿರುವುದರಿಂದ ಶೂಟಿಂಗ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ಹೇಳುತ್ತಾರೆ ಶಾಹುರಾಜ್.

 

ಫ್ರೆಶ್ ನ್ಯೂಸ್

Latest Posts

Featured Videos