ಶೈಲೂ ಚಿತ್ರದ ನಟಿಗೆ ಕಲ್ಯಾಣ!

 ಶೈಲೂ ಚಿತ್ರದ ನಟಿಗೆ ಕಲ್ಯಾಣ!

ಬೆಂಗಳೂರು, ಜ. 22: ಪರಭಾಷೆಯಿಂದ ಕನ್ನಡ ಚಿತ್ರರಂಗದಲ್ಲಿ ಬಂದು ಎಷ್ಟೋ ನಟ ನಟಿಯರು ಹೆಸರು ಮಾಡಿದ್ದಾರೆ. ಅದರಲ್ಲಿ ನಟಿ ಭಾಮಾ ಕೂಡ ಒಬ್ಬರು.

ಹೌದು, ಕನ್ನಡದಲ್ಲಿ ‘ಶೈಲೂ’ ಚಿತ್ರದ ಮೂಲಕ ತೆರೆ ಹಂಚಿಕೊಂಡಿದ್ದ ಮಲಯಾಳಂ ಮೂಲದ ನಟಿ ಭಾಮಾ ದಾಂಪತ್ಯ ಜೀವನ ಕಾಲಿಡಲು ಸಜ್ಜಾಗಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉದ್ಯಮಿ ಅರುಣ್ ಎಂಬವರ ಜೊತೆ ನಟಿ ಭಾಮಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಉದ್ಯಮಿ ಅರುಣ್ ನಟಿ ಭಾಮಾ ಅವರಿಗೆ ಆತ್ಮೀಯರಾಗಿದ್ದರು. ನಂತರ ಇವರಿಬ್ಬರು ಮನೆಯವರ ಜೊತೆ ಮಾತನಾಡಿ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ. ಕೇರಳ ಮೂಲಕ ಉದ್ಯಮಿ ಅರುಣ್ ಕೆನಡಾದಲ್ಲಿ ವ್ಯಾಸಂಗ ಮಾಡಿದ್ದಾರೆ. ಇದೇ ತಿಂಗಳಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಕೇರಳ ಸಂಪ್ರದಾಯದಂತೆ ನಟಿ ಭಾಮಾ ಅವರ ಮದುವೆ ನಡೆಯಲಿದೆ. 2007ರಲ್ಲಿ ‘ನಿವೇದ್ಯಂ‘ ಚಿತ್ರದ ಮೂಲಕ ಮಾಲಿವುಡ್ ಸಿನಿ ಪ್ರಯಾಣ ಪ್ರಾರಂಭಿಸಿದರು. ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಚಿತ್ರದಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಜೊತೆಗೆ 2010ರಲ್ಲಿ ತೆರೆ ಕಂಡ ‘ಮೊದಲ ಸಲ‘ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ನಂತರ ಗಣೇಶ್ ಜೊತೆ ‘ಶೈಲೂ ‘ಚಿತ್ರದಲ್ಲಿ ನಟಿದ್ದಾರೆ. ಇದಲ್ಲದೆ, ‘ಒಂದು ಕ್ಷಣದಲ್ಲಿ‘, ‘ಆಟೋ ರಾಜ‘, ‘ಬರ್ಫಿ‘, ‘ಅಪ್ಪಯ್ಯ‘, ‘ಅಂಬರ‘, ‘ಅರ್ಜುನ‘, ‘ರಾಗ ‘ಸಿನಿಮಾದಲ್ಲಿ ನಟಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos