360 ಡಿಗ್ರಿಗೆ ಹೀಗಾಗ ಬಾರದಿತ್ತು

360 ಡಿಗ್ರಿಗೆ ಹೀಗಾಗ ಬಾರದಿತ್ತು

ಲಂಡನ್, ಜೂನ್.6, ನ್ಯೂಸ್ ಎಕ್ಸ್ ಪ್ರೆಸ್ :  ಅಂತರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್, ಮತ್ತೆ ನಿವೃತ್ತಿ ವಾಪಾಸ್ ಪಡೆದು ಕಡೇ ಘಳಿಗೆಯಲ್ಲಿ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಬಯಸಿದ್ದರಂತೆ. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಡಳಿತ ಮಂಡಳಿ ಎಬಿಡಿ ಮನವಿಯನ್ನು ತಳ್ಳಿಹಾಕಿತ್ತು ಎಂಬ ಆಘಾತಕಾರಿ ಮಾಹಿತಿಯೀಗ ಹೊರಬಿದ್ದಿದೆ. 35 ವರ್ಷದ ಎಬಿಡಿ, ನಾಯಕ ಫಾಫ್ ಡುಪ್ಲೆಸಿಸ್, ಕೋಚ್ ಒಟ್ಟೀಸ್ ಗಿಬ್ಸನ್ ಹಾಗೂ ಆಯ್ಕೆ ಸಮಿತಿ ಸದಸ್ಯ ಲಿಂಡಾ ಜೊಂಡಿ ಬಳಿ, ತಾವು 2019ರ ಏಕದಿನ ವಿಶ್ವಕಪ್ ಆಡುವ ಇಂಗಿತ ವ್ಯಕ್ತಪಡಿಸಿದ್ದರಂತೆ. ಆದರೆ ಎಬಿಡಿ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಲಾಗಿತ್ತಂತೆ.

ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಆಟಗಾರ ದೇಶದ ಪರ ದೇಶಿಯ ಟೂರ್ನಿಯಲ್ಲಿ ಪಾಲ್ಗೊಂಡಿರಬೇಕು, ಇಲ್ಲವೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿರಬೇಕು ಎನ್ನುವ ನಿಯಮವಿದೆ.  ಇದಷ್ಟೇ ಅಲ್ಲದೇ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ತಿಂಗಳುಗಳು ಇರುವಾಗ ಎಬಿಡಿ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರತಿನಿಧಿಸಿದ್ದ ರಸ್ಸಿ ವ್ಯಾನ್ ಡರ್ ಡ್ಯುಸೇನ್ ಆಡಿದ ಮೊದಲ 4 ಪಂದ್ಯಗಳಲ್ಲಿ 3 ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಹೀಗಾಗಿ ಅಂತಹ ಆಟಗಾರರನ್ನು ಕೈಬಿಟ್ಟು ಎಬಿಡಿಗೆ ಸ್ಥಾನ ನೀಡುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos