‘ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ವೇಸಗಿ ಹಲ್ಲೇ ನಡೆಸಿದ ಕಾಮುಕರ ಬಂಧನ’

‘ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ವೇಸಗಿ ಹಲ್ಲೇ ನಡೆಸಿದ ಕಾಮುಕರ ಬಂಧನ’

ಶಹಾಪುರ: ನಗರದ ಹನಿಟ್ರ್ಯಾಪ್ ಶಂಕೆಯ ಮೇಲೆ ದುಷ್ಕರ್ಮಿಗಳ ಗೊಂಪೊಂದು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೇ ನಡೆಸಿದ ಘಟನೆ ನಡೆದಿದ್ದು ನಗರ ಜನತೆಯನ್ನೇ ಬೆಚ್ಚಿಬೀಳಿಸಿದೆ. ಸುಮಾರು 9 ತಿಂಗಳ ಹಿಂದೆ ನಡೆದ ಈ ಕೃತ್ಯ ಇಲ್ಲಿಯವರೆಗೆ ಮರೆ ಮಾಚಿತ್ತು ಆದರೆ ವಿಕೃತ ವರ್ತನೆ ಮಾಡಿದ ವಿಡಿಯೋ ವೈರಲ್ ಆಗಿದ್ದು ಆರೋಪಿತರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ.

ತಾಲೂಕಿನ ರಸ್ತಾಪುರ ಕ್ರಾಸ್ ಹತ್ತೀರ ಈ ಕೃತ್ಯ ನಡೆಸಿದ್ದು ಐದಾರು ಜನರಿದ್ದ ತಂಡ ಮಹಿಳೆಯನ್ನು ಕಬ್ಬಿನ ಜಲ್ಲೇಯಿಂದ ಥಳಿಸಿ ಅಂಗಾಗ ಮುಟ್ಟಿ ಅದನ್ನು ವಿಡಿಯೋ ಮಾಡಿ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದು ಈ ಪ್ರಕರಣದ ಕುರಿತು ಜಾಲ ಹಿಡಿದು ವಿಶೇಷ ತಂಡ ರಚಿಸಿ ಪೊಲೀಸರು ಬೇದಿಸಿದ್ದು ನೀಚರು ಸೇರೆ ಸಿಕ್ಕಿದ್ದಾರೆ. ಕೃತ್ಯದ ಪ್ರಮುಖ ಆರೋಪಿಯಾಗಿರುವ ಹೋಮ್‍ಗಾರ್ಡ್ ಮತ್ತು ನಗರ ಠಾಣೆಯ ಪಿಎಸ್‍ಐ ಅವರ ವಾಹನ ಚಾಲಕನಾಗಿದ್ದ ನಿಂಗರಾಜ್ ತಂದೆ ಭೀಮರಾಯ ಬೇವಿನಹಳ್ಳಿ (24), ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪ ತಂದೆ ಸಂಗಪ್ಪ ನಾಟೇಕರ್(23), ಪಾನ್ ಶಾಪ್ ಹಾಕಿಕೊಂಡಿದ್ದ ಭೀಮಾಶಂಕರ್ ತಂದೆ ಮಲ್ಲಯ್ಯ (28) ಹೊಸ ಬಸ್ ನಿಲ್ದಾಣದ ಹತ್ತೀರ ಎಗ್‍ರೈಸ್ ಬಂಡಿ ಕೆಲಸ ಮಾಡುತ್ತಿದ್ದ ಶರಣು ತಂದೆ ಮಹಾದೇವಪ್ಪ ನಾಯ್ಕೋಡಿ(22) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಎಸ್‍ಪಿ ಡಾ ಸಿ.ಬಿ ವೇದಮೂರ್ತಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಿವೈಎಸ್‍ಪಿ ಸಂತೊಷ ಬನ್ನಟ್ಟಿ, ಪಿಐ ಚೆನ್ನಯ್ಯ ಹಿರೇಮಠ್, ಸಿಪಿಐ ಶ್ರೀನಿವಾಸ್ ಅಲ್ಲಾಪೂರೆ, ಪಿಎಸ್‍ಐ ಚಂದ್ರಕಾಂತ ಮೇಕಾಲೆ, ಪಿಎಸ್‍ಐ ಶ್ಯಾಮ್‍ಸುಂದರ್, ಪಿಎಸ್‍ಐ ಹಣಮಂತ ಬಂಕಲಗಿ, ನಾರಾಯಣ, ಬಾಬು, ಲಕ್ಕಪ್ಪ, ಭೀಮಣ್ಣಗೌಡ, ಸತೀಶ್, ಸಿದ್ರಾಮಯ್ಯ ಸ್ವಾಮಿ, ಹೊನ್ನಪ್ಪ, ಹಣಮಂತ, ದೇವು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.

ಸಂತ್ರಸ್ತೆಯ ದೂರು

ಕಳೆದ 9 ತಿಂಗಳ ಹಿಂದೆ ಈ ಘಟನೆ ನಡೆದಿದೆ ಆರೋಪಿತರು ನನಗೆ ಜೀವ ಬೇದರಿಕೆ ಹಾಕಿದ್ದು ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಆದ್ದರಿಂದ ಈ ವರೆಗೂ ನಾನು ಈ ಕುರಿತು ಎಲ್ಲಿಯೂ ಹೇಳಿಲ್ಲ ಇದೀಗ ವಿಡಿಯೋ ವೈರಲ್ ಆಗಿ ಆರೋಪಿತರನ್ನು ಪೊಲೀಸರೆ ಬಂಧಿಸಿದ್ದು ಧೈರ್ಯದಿಂದ ಬಂದು ದೂರು ದಾಖಲಿಸಿದ್ದೇನೆ ಎಂದು ಸಂತ್ರಸ್ಥೆಯು ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ತಪ್ಪೊಪ್ಪಿಕೊಂಡ ಕಾಮುಕರು

ಕಳೆದ 9 ತಿಂಗಳ ಹಿಂದೆ ನಗರದ ಬಸ್ ನಿಲ್ದಾಣದ ಹತ್ತೀರ ಕುಳಿತಿದ್ದ ಈ ಮಹಿಳೆಯನ್ನು ತಮ್ಮ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹೆದ್ದಾರಿಯ ಪಕ್ಕದ ಜಮೀನಿನ ಕಗ್ಗತ್ತಲಿನಲ್ಲಿ ಕರೆದೊಯ್ದು ಆಕೆಯನ್ನು ಹೆದರಿಸಿ. ಈ ಮೊದಲು ಹನಿಟ್ರ್ಯಾಪ್ ಮಾಡಿರುವ ಮಹಿಳೆ ನೀನೇ ಅಲ್ಲವೇ ನನ್ನಿಂದ ಪಡೆದ ಹಣ ಹಿಂದಿರುಗಿಸು ಇಲ್ಲ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಾಗುವುದೆಂದು ಎದುರಿಸಿದ ಕಾಮುಕರು ಮಹಿಳೆಯ ಮೇಲೆ ಅತ್ಯಾಚಾರ ವೇಸಗಿ, ಆಕೆಯ ಮೇಲೆ ಹಲ್ಲೇ ನಡೆಸಿದ್ದಲ್ಲದೇ ವಿಡಿಯೋ ಮಾಡಿ ಮಹಿಳೆಯ ಬಳಿ ಇದ್ದ 5 ಸಾವಿರ ರೂ ಹಣ ಮತ್ತು ಮೊಬೈಲನ್ನು ದೋಚಿ ಕೊಂಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಮಹಿಳೆಯರಿಗಿಲ್ಲ ರಕ್ಷಣೆ

ಈ ಹಿಂದೆಯೂ ಸಹ ಆಟೋ ಚಾಲಕರಿಂದ ಹೀನ ಕೃತ್ಯ ನಡೆದಿದ್ದು ಇಡೀ ಮಾನವ ಕೂಲವೇ ತಲೆ ತಗ್ಗಿಸುವಂತಹ ಘಟನೆ ನಡೆದಿತ್ತು ಮತ್ತೇ ಇದೀಗ ಇಂತಹ ಇನ್ನೊಂದು ಪೈಶಾಚೀಕ ಹೀನ ಕೃತ್ಯ ಬೆಳಕಿಗೆ ಬಂದಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ವಿದ್ಯಾರ್ಥಿನಿಯರ, ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಶೋಷಣೆ ಲೈಂಗಿಕ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಪೊಲೀಸರಿಂದ ಸೂಕ್ತ ಭದ್ರತೆ ರಕ್ಷಣೆ ಇಲ್ಲದೇ ಇರುವುದು ಈ ಕೃತ್ಯಗಳಿಗೆ ಕಾರಣವಾಗಿವೆ ಎಂದು ನಗರ ಜನತೆ ಆಕ್ರೋಶ ವ್ಯಕ್ತಪಡಿಸುತ್ತೀದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos