ಒಟ್ಟು 29  ಸ್ತಬ್ದಚಿತ್ರಗಳು, ಅದರಲ್ಲಿವೆ ಸರ್ಕಾರದ ಸಾಧನೆಗಳು

ಒಟ್ಟು 29  ಸ್ತಬ್ದಚಿತ್ರಗಳು, ಅದರಲ್ಲಿವೆ ಸರ್ಕಾರದ ಸಾಧನೆಗಳು

ಒಟ್ಟು 29  ಸ್ತಬ್ದಚಿತ್ರಗಳು, ಅದರಲ್ಲಿವೆ ಸರ್ಕಾರದ ಸಾಧನೆಗಳು.

ಮೈಸೂರು, ಅ. 5: ಮೈಸೂರಿನ ವಿಶ್ವವಿಖ್ಯಾತ ನಾಡಹಬ್ಬ ದಸರೆಯ ಅಂಗವಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ವಿವಿಧ ಇಲಾಖೆಗಳಿಂದ 39 ಸ್ಥಬ್ಧಚಿತ್ರಗಳು ಆರಿಸಲ್ಪಟ್ಟಿವೆ. ಜಂಬೂ ಸವಾರಿಯಲ್ಲಿ ಈ ಸ್ಥಬ್ದಚಿತ್ರಗಳೂ ಕೂಡ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳಲಿದ್ದು  ಪ್ರತಿಯೊಂದು ಜಿಲ್ಲೆಯ ಪರಂಪರೆ ಹಾಗೂ ವೈವಿಧ್ಯತೆ ಅನಾವರಣಗೊಳಿಸುವ ಚಿತ್ರಗಳೊಡನೆ ಈ ಬಾರಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಒಟ್ಟೂ 39 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ.

ವಿಶೇಷವಾಗಿ ಈ ಬಾರಿ ಐತಿಹಾಸಿಕ ಹಿನ್ನಲೆ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ, ಪರಿಸರ, ಅರಣ್ಯೀಕರಣ, ಅಂತರ್ಜಲ, ನೆರೆ-ಬರ, ಚಂದ್ರಯಾನ, ಸಂವಿಧಾನ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಕುರಿತು ಬಿಂಬಿಸುವ ಸ್ಥಬ್ಧಚಿತ್ರಗಳು ನಗರದ ಎ.ಪಿ.ಎಂ.ಸಿ ಆವರಣದಲ್ಲಿ ಸ್ಥಬ್ಧ ಚಿತ್ರಗಳು ಸಿದ್ಧಗೊಳ್ಳುತ್ತಿದ್ದು ಬಂದಂತಹ ಕಲಾವಿದರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ, ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ.

ಜಿಲ್ಲಾವಾರು ಸ್ಥಬ್ಧಚಿತ್ರಗಳ ಮಾಹಿತಿ ಇಂತಿದೆ

  1. 1. ಬೆಳಗಾಂ- ಪ್ರವಾಹದಿಂದ ನಲುಗಿದ ಬೆಳಗಾವಿ, 2.ಬಾಗಲಕೋಟೆ-ಅತಿವೃಷ್ಠಿ ಹಾಗೂ ಪುನರ್ವಸತಿ ಕಾರ್ಯಗಳು
  2. 3. ಧಾರವಾಡ-ಸಾಂಸ್ಕೃತಿಕ ವೈಭವ,

4.ಹಾವೇರಿ-ಶಂಖನಾದ ಮೊಳಗಿಸುತ್ತಿರುವ ಕನಕದಾಸರು

  1. 5. ಗದಗ- ಭೇಟಿ ಪಡವೋ ಭೇಟಿ ಬಚಾವೋ
  2. 6. ಉತ್ತರ ಕನ್ನಡ-ಕದಂಬ ಬನವಾಸಿ ಮಧುಕೇಶ್ವರ ದೇವಸ್ಥಾನ
  3. 7. ವಿಜಯಪುರ-ವಚನ ಪಿತಾಮಹ ಫ.ಹು ಹಳಕಟ್ಟಿ
  4. 8. ಬೆಂಗಳೂರು ನಗರ-ಚಂದ್ರಯಾನ-2
  5. 9. ಬೆಂಗಳೂರು ಗ್ರಾಮಾಂತರ-ಸ್ವಚ್ಛತ ಕಡೆಗೆ ನಮ್ಮ ನಡಿಗೆ
  6. 10. ಚಿತ್ರದುರ್ಗಾ-ಹೆಣ್ಣು ಭ್ರೂಣ ಹತ್ಯೆ ತಡೆ ಹಾಗೂ ಮಹಿಳಾ ಸಾಧಕರು
  7. 11. ದಾವಣಗೆರೆ-ಏರ್ ಸ್ಟ್ರೈಕ್
  8. 12. ಕೋಲಾರ-ಅಂತರಗಂಗೆ
  9. 13. ಶಿವಮೊಗ್ಗ-ಫಿಟ್ ಇಂಡಿಯಾ

14: ತುಮಕೂರು-ಸಮಗ್ರ ಕೃಷಿ ಪದ್ದತಿ ಹಾಗೂ ನಡೆದಾಡುವ ದೇವರು

15: ರಾಮನಗರ-ಮಳೂರು ಅಂಬೆಗಾಲು ಕೃಷ್ಣ

16: ಚಿಕ್ಕಬಳ್ಳಾಪುರ-ರೇಷ್ಮೆ ಮತ್ತು ಹೆಚ್ ನರಸಿಂಹಯ್ಯ

17: ಗುಲ್ಬರ್ಗಾ-ಆಯುಷ್ಮಾನ್ ಭಾರತ್

18:ಬಳ್ಳಾರಿ-ಹಂಪಿ ವಾಸ್ತುಶಿಲ್ಪ ಕಲಾ ವೈಭವ

19: ಬೀದರ್-ಫಸಲ್ ಭೀಮಾ ಯೋಜನೆ

20: ಕೊಪ್ಪಳ-ಗವಿಸಿದ್ದೇಶ್ವರ ಬೆಟ್ಟ

21: ರಾಯಚೂರು-ಗೂಗಲ್ ಬ್ರಿಡ್ಜ್, ಪ್ರಧಾನ ಮಂತ್ರಿ ಸಿಂಚಯಿ ಹಾಗೂ ನರೇಗಾ ಯೋಜನೆ

22: ಯಾದಗಿರಿ-ಅಂಬಿಗರ ಚೌಡಯ್ಯ,

23: ಮೈಸೂರು-ಚಾಮರಾಜ ಒಡೆಯರ್ ಅವರ 100 ನೇ ವರ್ಷದ ಸಾಧನೆ,

24: ಚಾಮರಾಜನಗರ-ಸಮೃದ್ದಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ,

25: ಚಿಕ್ಕಮಗಳೂರು-ಶಿಶಿಲಬೆಟ್ಟ,

26; ದಕ್ಷಿಣ ಕನ್ನಡ-ಮಂಗಳದೇವಿ ಹಾಗೂ ಭಾರತದ ದೊಡ್ಡ ಪೆಟ್ರೋಲಿಯಂ ಘಟಕ,

27; ಹಾಸನ-ಎತ್ತಿನಹೊಳೆ ಯೋಜನೆ,

28 : ಕೊಡಗು-ಗುಡ್ಡ ಕುಸಿತ ಜಾಗೃತಿ ಮೂಡಿಸುವ ಬಗ್ಗೆ,

29: ಮಂಡ್ಯ-ಶ್ರೀ ಆದಿ ಚುಂಚನಗಿರಿ ಮಠ,

30: ಉಡುಪಿ : ಕೃಷ್ಣ ಮಠದ ಗೋಪುರ,

31: ದಸರಾ ಉಪ ಸಮಿತಿ-ಆನೆ ಬಂಡಿ,

32: ಜೆ.ಎಸ್.ಎಸ್ ಮಠ,

33: ವಾರ್ತಾ ಇಲಾಖೆ-ಸರ್ಕಾರ ಸೌಲಭ್ಯಗಳ ಮಾಹಿತಿ

34: ದಸರಾ ಉಪ ಸಮಿತಿ-ಮೆಮೊರೈಲ್, ಉಡಾನ್ ಹಾಗೂ ಹತ್ತು ಪಥದ ರಸ್ತೆ,

35: ಜಿಲ್ಲಾಡಳಿತ : ಸಾಮಾಜಿಕ ನ್ಯಾಯ,

36: ಕಾವೇರಿ ನೀರಾವರಿ ನಿಗಮ-ನೀರಾವರಿ ನಿಗಮ ಮಾಹಿತಿ,

37: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಪೋಷಣ ಅಭಿಯಾನ, ರಕ್ತಹೀನತೆ ಮುಕ್ತ ಭಾರತ,

38: ಪ್ರವಾಸೋದ್ಯಮ ಇಲಾಖೆ-ನಿಮ್ಮ ಸಾಹಸಗಾಥೆ ನೀವೇ ರಚಿಸಿ,

39: ಮೈಸೂರು ವಿಶ್ವವಿದ್ಯಾನಿಲಯ-ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳು.

 

 

 

ಫ್ರೆಶ್ ನ್ಯೂಸ್

Latest Posts

Featured Videos