ಹಾಕಿ ಶರ್ಮಾಗೆ 75 ಲಕ್ಷ ಬಹುಮಾನ

ಹಾಕಿ ಶರ್ಮಾಗೆ 75 ಲಕ್ಷ ಬಹುಮಾನ

ಇಂಫಾಲ್: ಟೋಕಿಯೊಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡದ ಮಿಡ್ ಫೀಲ್ಡ್ ಆಟಗಾರ ನೀಲಕಂಠ ಶರ್ಮಾ ಅವರಿಗೆ 75 ಲಕ್ಷ ನಗದು ಬಹುಮಾನ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಘೋಷಿಸಿದ್ದಾರೆ.
ಅವರೊಂದಿಗೆ ಗುರುವಾರ ದೂರವಾಣಿ ಮೂಲಕ ಮಾತನಾಡಿದ್ದು, ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿ, ಜತೆಗೆ ಹಾಕಿ ತಂಡದ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
41 ವರ್ಷಗಳ ಬಳಿಕ ಒಲಂಪಿಕ್ಸ್ ನಲ್ಲಿ ಕಚಿನ ಪದಕ ಗೆದ್ದ ಸಾಧನೆ ಮಾಡಿತ್ತು. ಜರ್ಮನಿ ವಿರುದ್ಧ 5-4 ಗೋಲುಗಳ ಅಂತರ ಗೆಲುವು ದಾಖಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.
ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗಳಿಸುವ ಆಟಗಾರರಿಗೆ 1.2 ಕೋಟಿ, ಬೆಳ್ಳಿ ಪದಕ 1 ಕೋಟಿ ಮತ್ತು ಕಂಚಿಗೆ 75 ಲಕ್ಷ ನಗದು ಬಹುಮಾನ ನೀಡುವುದಾಗಿ ಮಣಿಪುರ ಸರ್ಕಾರ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos