ಪಾಲ್‍ ಗಢ್‍ನಲ್ಲಿ 3 ಲಘು ಭೂಕಂಪ

ಪಾಲ್‍ ಗಢ್‍ನಲ್ಲಿ 3 ಲಘು ಭೂಕಂಪ

ಪಾಲ್ಗಢ್, ಡಿ. 14 : ಮಹಾರಾಷ್ಟ್ರದ ಪಾಲ್‍ಗಢ್ ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ ಮೂರು ಬಾರಿ ಲಘು ತೀವ್ರತೆಯ ಭೂಕಂಪನಗಳು ಸಂಭವಿಸಿವೆ. ಸಾವು-ನೋವಿನ ಅಥವಾ ಆಸ್ತಿ-ಪಾಸ್ತಿ ಹಾನಿಯ ವರದಿಗಳು ಇಲ್ಲದಿದ್ದರೂ ಜನರು ಭಯಭೀತರಾಗಿದ್ದಾರೆ.

ದಹನು ತಾಲ್ಲೂಕಿನ ದುಂಡಲ್‍ವಾಡಿ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನದಿಂದ ಇಂದು ನಸುಕಿನವರೆಗೆ ಮೂರು ಭಾರೀ ಲಘು ತೀವ್ರತೆಯ ಭೂಕಂಪನಗಳು ಸಂಭವಿಸಿದವು ಎಂದು ಜಿಲ್ಲಾ ಕಲೆಕ್ಟರ್ ಡಾ. ಕೈಲಾಸ್ ಶಿಂದೆ ತಿಳಿಸಿದ್ದಾರೆ.ಇಂದು  ಮುಂಜಾನೆ 5.22ರಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.9ರಷ್ಟಿತ್ತು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ವಿವೇಕಾನಂದ ಕದಂ ಹೇಳಿದ್ದಾರೆ. ನಿನ್ನೆ ರಾತ್ರಿ 9.55ರಲ್ಲಿ 3.4ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos