ಆಟಗಾರ್ತಿಗೆ 3 ಕೋಟಿ ರೂ. ಬಹುಮಾನ ಘೋಷಣೆ

ಆಟಗಾರ್ತಿಗೆ 3 ಕೋಟಿ ರೂ. ಬಹುಮಾನ ಘೋಷಣೆ

ಅಹಮದಾಬಾದ್: ಟೋಕಿಯೊ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಪಟೇಲ್‌ಗೆ ಗುಜರಾತ್ ಸರ್ಕಾರ 3 ಕೋಟಿ ಬಹುಮಾನ ಘೋಷಿಸಿದೆ.
ಗುಜರಾತ್‌ನ ಮೆಹ್‌ಸಾನಾ ಜಿಲ್ಲೆಯ ಸುಂಧಿಯಾ ಗ್ರಾಮದವರು. 34 ವರ್ಷದ ಭಾವಿನಾ ಬೆನ್, ಭಾನುವಾರ ನಡೆದ ಮಹಿಳೆಯರ ಟೇಬಲ್ ಟೆನಿಸ್ ಕ್ಲಾಸ್ 4 ಫೈನಲ್ ಹಣಾಹಣಿಯಲ್ಲಿ ಚೀನಾದ ವಿಶ್ವ ನಂ.1 ಯಿಂಗ್ ಜೌ ವಿರುದ್ಧ ಪರಾಭವಗೊಂಡಿದ್ದರು. 19 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಚೀನಾದ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿ ಪದಕ ಗಳಿಸಿದ್ದಾರೆ.
‘ಮೆಹ್‌ಸಾನಾ ಜಿಲ್ಲೆಯ ಪುತ್ರಿ ಭಾವಿನಾ ಬೆನ್ ಟೇಬಲ್ ಟೆನಿಸ್‌ನಲ್ಲಿ ತಮ್ಮ ಅಸಾಧಾರಣ ಸಾಧನೆ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ.

ಗುಜರಾತ್ ಮತ್ತು ದೇಶವು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರದ `ದಿವ್ಯಾಂಗ ಖೇಲ್ ಪ್ರತಿಭಾ ಪ್ರೋತ್ಸಾಹನ್ ಪುರಸ್ಕಾರ್ ಯೋಜನಾ’ ಅಡಿಯಲ್ಲಿ 3 ಕೋಟಿ ಬಹುಮಾನ ಘೋಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos