೨೫ ಸಾವಿರ ದಂಡ ವಿಧಿಸಿರುವುದು ಖಂಡನೀಯ

೨೫ ಸಾವಿರ ದಂಡ ವಿಧಿಸಿರುವುದು ಖಂಡನೀಯ

ದೇವದುರ್ಗ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯ್ಯಪುರ ಗ್ರಾಮದಲ್ಲಿ ಬಾಲಕನೋರ್ವ ಹುಟ್ಟುಹಬ್ಬ ನಿಮಿತ್ತವಾಗಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ತೆರಳಿ ನಮಸ್ಕರಿಸುವ ಸಂದರ್ಭದಲ್ಲಿ ಎರಡು ವರ್ಷದ ಮಗು ದೇಗುಲ ಪ್ರವೇಶಿಸಿದೆ ಇದನ್ನೇ ನೆಪಮಾಡಿಕೊಂಡು ಗ್ರಾಮದ ಪ್ರಮುಖ ಮುಖಂಡರು ಸಭೆ ಸೇರಿ ಮಗುವಿನ ಪೋಷಕರನ್ನು ಕರೆದು ನೀವು ಕೀಳು ಜಾತಿಯವರು ನಿಮ್ಮ ಮಗು ದೇಗುಲದ ಒಳಗಡೆ ಹೋಗಿ ಮೈಲಿಗೆಯಾಗಿದೆ ಅದನ್ನು ಶುಚ್ಚಿಗೊಳಿಸಲು ಮತ್ತು ಹೋಮ ಮಾಡಿಸುವ ಸಂಬಧ ಇಪ್ಪತೈದು ಸಾವಿರ ರೂಪಾಯಿ ದಂಡ ಕಟ್ಟಬೇಕು ಎಂದು ಅಲ್ಲಿನ ಮೇಲ್ಜಾತಿಯ ಮುಖಂಡರು ತೀರ್ಮಾನಿಸಿದ ಘಟನೆಯನ್ನು ನಮ್ಮ ಸಂಘಟನೆ ಬಲವಾಗಿ ಖಂಡನೆ ಮಾಡುತ್ತದೆ ಹಾಗೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳಬೇಕು ಎಂದು ಎಮ್‌ಆರ್‌ಎಚ್‌ಎಸ್ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರ ಹೇಳಿದರು.

ಇತ್ತೀಚ್ಚೆಗೆ ಮಹಿಳೆಯರ ಮೇಲೆ ಅತ್ಯಾಚಾರ ದಲಿತರ ಮೇಲೆ ದಾಳಿ ಕೊಲೆ ದೌರ್ಜನ್ಯ ಅಸ್ಪೃಶ್ಯತೆ ಜಾತಿನಿಂದನೆ ಮಾಡುವಂತಹ ಪ್ರಾಬಲ್ಯವನ್ನು ಮಟ್ಟಹಾಕುವಲ್ಲಿ ಸರ್ಕಾರ ಕೈಚೆಲ್ಲಿ ಕುಳಿತ್ತಿರುವುದು  ದುರ್ದೈವದ ಸಂಗತಿ ಈಗಲಾದರು ಸರ್ಕಾರ ಮಿಯ್ಯಪುರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಇಡೀ ಮನುಕುಲಕ್ಕೆ ದಕ್ಕೆಯುಂಟು ಮಾಡುವ ಹಾಗೆ ದಂಡ ವಿಧಿಸಿ ದೇವರ ಸಮವಾದ ಮಗುವಿಗೆ ಅವಮಾನಿಸಿ ಆ ಕುಟುಂಬಕ್ಕೆ ಅಗೌರವ ತೋರಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ಇವರಿಗೆ ಬರೆದಿರುವ ಮನವಿ ಪತ್ರವನ್ನು ಮಾನ್ಯ ತಹಶೀಲ್ದಾರ್ ಕಚೇರಿಯ ಶಿರಸ್ತೆದಾರ ಮೂಲಕ ಪತ್ರ ಸಲ್ಲಿಸಿದ ನಂತರ ಮಾತನಾಡಿದರು.

ಈ ಸಂದರ್ಭದಲ್ಲಿ ಭೀಮರಾಯ ಭಂಡಾರಿ, ಮಲ್ಲಯ್ಯ ಸಿಂಗ್ರಿ, ಶ್ಯಾಮಸುಂದರ, ಭೀಮಾಶಕರ ಯರಮಸಾಳು, ಇನ್ನಿತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos