2 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ

2 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ

ಬೆಂಗಳೂರು, ಜ. 25: ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ  ದಿನಾಚರಣೆ ಅಂಗವಾಗಿ ಮೂರು ಸಾವಿರ ಅಡಿ ಬೃಹತ್ ತ್ರಿವರ್ಣ ಧ್ವಜ ಅನಾವರಣಗೊಂಡಿದೆ.

ಬಿಬಿಎಂಪಿ ಸದಸ್ಯ ಮತ್ತು ಬಾಂಧವ ಸಂಸ್ಥೆಯ ಮುಖ್ಯಸ್ಥ ಎನ್ ನಾಗರಾಜ್ ಹಾಗೂ ಜಯನಗರ ಶಾಸಕಿ ಸ್ಯೌಮ್ಯ ರೆಡ್ಡಿ ನೇತೃತ್ವದಲ್ಲಿ ಸತತ ಐದನೇ ವರ್ಷವಾದ ಈ ಬಾರಿಯೂ ವಿಶಿಷ್ಟವಾಗಿ 300 ಕೆ.ಜಿ. ರಂಗೋಲಿ ಪುಡಿಯಲ್ಲಿ ತ್ರಿವರ್ಣ ರಚಿಸಲಾಗಿದೆ.

ಈ ಮೂಲಕ ಅದ್ದೂರಿ ಗಣರಾಜ್ಯೋತ್ಸವಕ್ಕೆ ಮೈದಾನ ಸಜ್ಜಾಗಿದೆ. ರಾಷ್ಟ್ರಾಭಿಮಾನದ ಸಂಕೇತವಾಗಿ ಬೃಹತ್ ತ್ರಿವರ್ಣ ಧ್ವಜ ರಚಿಸಿದ್ದು, ಇದಕ್ಕೆ ಶಾಲಾ ಮಕ್ಕಳು, ಯುವ ಸಮೂಹ, ಬಾಂಧವ ಸಂಸ್ಥೆಯ ಸಂಸ್ಥೆಯ 40ಕ್ಕೂ ಹೆಚ್ಚು ಮಹಿಳೆಯರು ಕೇಸರಿ, ಬಿಳಿ, ಹಸಿರು ಬಣ್ಣದ ರಂಗೋಲಿಯಿಂದ ತ್ರಿವರ್ಣ ಧ್ವಜಕ್ಕೆ ಅಂತಿಮ ರೂಪ ನೀಡಿದರು. ಸ್ವತಃ ಶಾಸಕಿ ಸೌಮ್ಯ ರೆಡ್ಡಿ ರಂಗೋಲಿ ಬಿಡಿಸಿ ದೇಶಾಭಿಮಾನದ ಕಾಯಕಕ್ಕೆ ಕೈ ಜೋಡಿಸಿದರು. ಸುಮಾರು ಬಿಡಿ ಹೂವುಗಳನ್ನು ಧ್ವಜದ ಮೇಲೆ ಆಕರ್ಷಕವಾಗಿ ಜೋಡಿಸಿರುವುದು ವಿಶೇಷವಾಗಿದೆ. ಶಾಲಾ ಮಕ್ಕಳು ಮತ್ತು ಜನ ಸಾಮಾನ್ಯರಿಗೆ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ರಂಗೋಲಿ ಬಿಡಿಸಲಾಗಿದೆ. ಇಡೀ ಕಿತ್ತೂರು ರಾಣಿ ಚೆನ್ನಮ್ಮ ಆಟದ ಮೈದಾನವನ್ನು ರಾಷ್ಟ್ರಧ್ವಜ ಆವರಿಸಿಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos