18 ವರ್ಷದ ಯುವತಿ ಮೇಲೆ ಅತ್ಯಾಚಾರ

18 ವರ್ಷದ ಯುವತಿ ಮೇಲೆ ಅತ್ಯಾಚಾರ

ಹೈದರಾಬಾದ್ , ಡಿ. 14 : ಪಶು ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮುನ್ನವೇ ಹೈದರಾಬಾದಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದ್ದು, 18 ವರ್ಷದ ಯುವತಿ ಮೇಲೆ ಆಟೋ ಚಾಲಕ ಅತ್ಯಾಚಾರ ಎಸಗಿದ್ದಾನೆ. ನಗರದ ಚಂದ್ರಯಂಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 8ರಂದು ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯುವತಿ ಹಾಗೂ 10 ವರ್ಷದ ಸಹೋದರಿ ಇಬ್ಬರೂ ಡಿಸೆಂಬರ್ 8ರ ರಾತ್ರಿ ತಮ್ಮ ಮನೆಯಿಂದ ಅಜ್ಜಿ ಮನೆಗೆ ತೆರಳುವಾಗ ದಾರಿ ತಪ್ಪಿದ್ದಾರೆ. ಆಟೋರಿಕ್ಷಾ ಚಾಲಕನಾಗಿದ್ದ ವ್ಯಕ್ತಿಯ ಹಿರಿಯ ಸಹೋದರ ಹುಡುಗಿಯರನ್ನು ಗುರುತಿಸಿ ಮನೆಗೆ ಕರೆದೊಯ್ದಿದ್ದಾನೆ. ಇದನ್ನು ಕಂಡ ಆರೋಪಿಗಳ ತಾಯಿ, ಮಕ್ಕಳನ್ನು ಅವರ ಮನೆಗೆ ಬಿಡುವಂತೆ ಕಿರಿಯ ಮಗನಿಗೆ ಹೇಳಿದ್ದಾರೆ. ಆದರೆ ಕಾಮುಕ ಯುವತಿಯನ್ನು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos