ಸಣ‍್ಣ ಮನೆಗೂ ಲಕ್ಷಾಂತರ ವಿದ್ಯುತ್ ಬಿಲ್, ಬೆಚ್ಚಿ ಬಿದ್ದ ಮನೆ ಮಂದಿ

ಸಣ‍್ಣ ಮನೆಗೂ ಲಕ್ಷಾಂತರ ವಿದ್ಯುತ್ ಬಿಲ್, ಬೆಚ್ಚಿ ಬಿದ್ದ ಮನೆ ಮಂದಿ

ಬಳ್ಳಾರಿ, ಜ. 24: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ನಗರದಲ್ಲಿ ಕೆಲವು ಜನರಿಗೆ ಜೆಸ್ಕಾಂನಿಂದ ವಿದ್ಯುತ್ ಬಿಲ್ ನೀಡಿದ್ದು, ಬಿಲ್ನಲ್ಲಿ ಲಕ್ಷಾಂತರ ಹಣವನ್ನು ಉಲ್ಲೇಖ ಮಾಡಲಾಗಿದೆ. ಒಂದೊಂದು ಮನೆಗೆ ಲಕ್ಷಾಂತರ ಬಿಲ್ ನೀಡಿರುವುದನ್ನು ನೋಡಿ ಜನ ಜೆಸ್ಕಾಂ ಸಿಬ್ಬಂದಿಗೆ ಹಿಡಿ ಶಾಪ ಹಾಕಿದ್ದು, ಸಣ್ಣ ಮನೆಗಳಿಗೂ ಕೂಡ ಇಷ್ಟೊಂದು ಬಿಲ್ ಬರೋದಕ್ಕೆ ಹೇಗೆ ಸಾಧ್ಯ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನು ಹೀಗೆ ಬಿಲ್ ಕೊಟ್ಟ ತಕ್ಷಣ ಎಚ್ಚೆತ್ತುಕೊಂಡ ಜೆಸ್ಕಾಂ ಸಿಬ್ಬಂದಿ ಕೂಡಲೇ ಆಗಿರುವ ಲೋಪವನ್ನು ಸರಿಪಡಿಸುವುದಕ್ಕೆ ಮುಂದಾಗಿದ್ದು, ಹೊಸ ಬಿಲ್ ನೀಡಿದೆ ಎನ್ನಲಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos