ದರ್ಶನ್-ಪ್ರೇಮ್ ಕಾಂಬಿನೇಷನ್ ನಲ್ಲಿ ಸಿನಿಮಾ

ದರ್ಶನ್-ಪ್ರೇಮ್ ಕಾಂಬಿನೇಷನ್ ನಲ್ಲಿ ಸಿನಿಮಾ

ಬೆಂಗಳೂರು : ಕೆಲವೊಮ್ಮೆ ಕೆಲವರು ಊಹಾಪೋಹದ ಸುದ್ದಿಗಳನ್ನು ಹರಿಬಿಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವೂ ವೈರಲ್ ಸಹ ಆಗುತ್ತವೆ. ಇಂತಹ ಸುದ್ದಿ ಹರಿಬಿಡಲೆಂದೇ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿರುತ್ತೆ.

ಇಂಥದ್ದೇ ಒಂದು ಘಟನೆಯಲ್ಲಿ, ಟ್ವಿಟರ್‌ನಲ್ಲಿ ಸೃಷ್ಟಿಸಲಾಗಿದ್ದ ನಕಲಿ ಖಾತೆಯೊಂದರ ಮೂಲಕ ನಿರ್ದೇಶಕ ಪ್ರೇಮ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿಯೊಂದನ್ನು ಹರಿಬಿಡಲಾಗಿತ್ತು.

ಈ ಸುದ್ದಿಯನ್ನು ಅಲ್ಲಗಳೆದಿರುವ ಪ್ರೇಮ್ ಪತ್ನಿ ಹಾಗೂ ನಟಿ ರಕ್ಷಿತಾ, ಅದು ಪ್ರೇಮ್ ಅವರ ಖಾತೆಯಲ್ಲ…ಇದನ್ನೆಲ್ಲಾ ಹೇಳುತ್ತಿರುವ ಯಾರೇ ಆದರೂ ದೇವರು ನಿಮಗೆ ಒಳ್ಳೆಯದು ಮಾಡಲಿ…ಅವರಿಬ್ಬರೂ ಒಟ್ಟಿಗೇ ಕೆಲಸ ಮಾಡುವುದನ್ನು ನೋಡಲು ಇಚ್ಛಿಸುತ್ತೇನೆ.ಇದು ನಿಜವಾಗದೇ ಇದ್ದಲ್ಲಿ. ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos