ಮಿಡಿದ ಮಂಗಳಮುಖಿಯರ ಹೃದಯ

ಮಿಡಿದ ಮಂಗಳಮುಖಿಯರ ಹೃದಯ

ಗಜೇಂದ್ರಗಡ;ಏ,8: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್ ಆದೇಶದಿಂದ ಸಂಕಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಜನತಾ ಪ್ಲಾಟ್‌ನಲ್ಲಿನ ಬಡ ಕುಟುಂಬಕ್ಕೆ ಮಂಗಳಮುಖಿ ಹಾಗೂ ಕರ್ನಾಟಕ ಅಭಿವೃದ್ಧಿ ವೇದಿಕೆಯ ಕಾರ್ಯಕರ್ತರಿಂದ ಪುಡ್ ಪ್ಯಾಕೇಟ್ ವಿತರಣೆ ಮಾಡಲಾಯಿತು.

ಲಾಕ್‌ಡೌನ್‌ನಿಂದ ಸರಿಯಾಗಿ ಊಟ ಸಿಗದೆ, ಉಪವಾಸದಿಂದ ಇರುವ ಜನರಿಗೆ ಕರ್ನಾಟಕ ಅಭಿವೃದ್ಧಿ ವೇದಿಕೆಯ ಕಾರ್ಯಕರ್ತರು ಒಂದೊತ್ತಿನ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ್ದಾರೆ.

ಮಂಗಳ ಮುಖಿ ದುರ್ಗಾ ಮಾತನಾಡಿ, ನಾನು ಕೂಡಾ ಕಡು ಬಡತನದಲ್ಲಿ ಜೀವನ ನಡೆಸುತ್ತಿದ್ದೇನೆ. ಆದರೆ ನಮ್ಮ ಈ ವಾರ್ಡ್ನಲ್ಲಿ ಅದೆಷ್ಟೋ ಜನ ಹೊಟ್ಟೆಗೆ ಹಿಟ್ಟು ಇಲ್ಲದೆ ಮನೆಯಲ್ಲಿ ನರಳಾಡುತ್ತಿದ್ದಾರೆ. ಅಂತವರಿಗೆ ಕರ್ನಾಟಕ ಅಭಿವೃದ್ಧಿ ವೇದಿಕೆ ಹಾಗೂ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದೇನೆ. ಈ ಲಾಕ್‌ಡೌನ್ ಮುಗಿಯುವವರೆಗೂ ನಾನು ಈ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿದರು.

ಕರ್ನಾಟಕ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ ಮಾತನಾಡಿ, ಅಗತ್ಯ ವಸ್ತುಗಳನ್ನು ಖರೀದಿಸಲು ಕಷ್ಟಪಡುತ್ತಿದ್ದ ಕಡು ಬಡಕುಟುಂಬಗಳನ್ನು ಗುರುತಿಸಿ, ಅವರಿಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನು ಹಾಗೂ ಅವರಿಗೆ ಈ ರೋಗದ ಬಗ್ಗೆ ಅರಿವು ಮೂಡಿಸಿ ಅವರನ್ನು ಹೊರ ಬಾರದಂತೆ ತಿಳುವಳಿಕೆ ನೀಡುತ್ತಿದ್ದೇನೆ. ಇದಕ್ಕೆ ಪ್ರತ್ಯೇಕವಾಗಿ, ಪರೋಕ್ಷವಾಗಿ ಸಹಾಯ ಮಾಡಿದ ನನ್ನ ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಹಾಗೂ ಈ ಲಾಕ್‌ಡೌನ್ ಮುಗಿಯುವವರೆಗೂ ನಮ್ಮ ಈ ಸೇವೆ ನಿರಂತರವಾಗಿರುತ್ತದೆ.

ಹನುಮAತ ಗೌಡರ್, ರಘು ಚವ್ಹಾಣ, ಶ್ರೀಕಾಂತ ಮೀಟಗಲ್ಲ, ಮುತ್ತು ಪಟ್ಟಣಶೆಟ್ಟಿ, ಅಲೀಸಾಬ ದಿಂದವಾಡ, ಮೌಲಿ ಬಂಡಿವಡ್ಡರ, ಬಾಬು ಬದಿ, ರವಿ ಮುತುಗಾರ, ಗಣೇಶ ಮನ್ವಡ್ಡರ ಮತ್ತಿತರರು ಇದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos