ಪ್ರಧಾನಿ ಮೋದಿಗೆ 16 ವರ್ಷದ ಸ್ವೀಡಿಷ್ ಬಾಲಕಿ ಹೇಳಿದ್ದೇನು?

ಪ್ರಧಾನಿ ಮೋದಿಗೆ 16 ವರ್ಷದ ಸ್ವೀಡಿಷ್ ಬಾಲಕಿ ಹೇಳಿದ್ದೇನು?

ನವದಿಲ್ಲಿ: ಸ್ವಿಡೀಷ್ ಪಾರ್ಲಿಮೆಂಟಿನ ಎದುರು ಕಳೆದ ಆಗಸ್ಟ್ ನಲ್ಲಿ ಶಾಲಾ ಮುಷ್ಕರ ನಡೆಸುವ ಮೂಲಕ ಗಮನ ಸೆಳೆದಿದ್ದ ಹದಿನಾರು ವರ್ಷದ ಗ್ರೇಟಾ ತಂಬರ್ಗ್, ಇದೀಗ ಹವಾಮಾನದ ಬದಲಾವಣೆಯನ್ನು ನಿರ್ಲಕ್ಷಿಸಬೇಡಿ ಎಂದು ವಿಶ್ವನಾಯಕರಿಗೆ ಎಚ್ಚರಿಕೆ ನಿಡಿದ್ದಾಳೆ.

ಡಿಜಿಟಲ್ ವಿಡಿಯೊ ಪಬ್ಲಿಷರ್ ಬ್ರಟ್ ಇಂಡಿಯಾಗೆ ನೀಡಿದ ಸಂದೇಶದಲ್ಲಿ ಈ ಬಾಲಕಿ ಉಲ್ಲೇಖಿಸಿದ ವಿಶ್ವನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡಾ ಸೇರಿದ್ದಾರೆ.

“ಆತ್ಮೀಯ ಪ್ರಧಾನಿ ಮೋದಿ, ನೀವು ಹವಾಮಾನ ಸಂಘರ್ಷದ ಬಗ್ಗೆ ಕೇವಲ ಮಾತನಾಡುವುದು ಮಾತ್ರವಲ್ಲ; ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಏಕೆಂದರೆ ಈ ರೀತಿ ನೀವು ಮುಂದುವರಿದರೆ, ಮಾಮೂಲಿನಂತೆ ಕಾರ್ಯ ನಿರ್ವಹಿಸುತ್ತಿದ್ದರೆ, ಕೇವಲ ಮಾತನಾಡುತ್ತಿದ್ದರೆ ಮತ್ತು ಸಣ್ಣ ಗೆಲುವುಗಳಿಗೇ ಸಂಭ್ರಮಿಸುತ್ತಾ ಕೂತರೆ, ನೀವು ವಿಫಲರಾಗುತ್ತೀರಿ.ನೀವು ವಿಫಲರಾದಲ್ಲಿ, ಭವಿಷ್ಯದ ಮಾನವ ಇತಿಹಾಸದಲ್ಲಿ ಅತ್ಯಂತ ಕಠೋರ ಖಳನಾಯಕನಾಗುತ್ತೀರಿ. ನೀವು ಅದನ್ನು ಇಚ್ಛಿಸಲಾರಿರಿ” ಎಂದು ಹೇಳಿದ್ದಾಳೆ. ಈ ಪರಿಸರ ಹೋರಾಟಗಾರ್ತಿ ಅಸ್ಪೆರ್ಜರ್ ಸಿಂಡ್ರೋಮ್ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತಂಗ್‍ಬರ್ಗ್ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಕಳೆದ ಡಿಸೆಂಬರ್‍ನಲ್ಲಿ ಈಕೆ ಮಾಡಿದ ಭಾಷಣವನ್ನು ಎಲ್ಲ ಹೋರಾಟಗಾರರು ಮತ್ತು ರಾಜಕಾರಣಿಗಳು ಪ್ರಶಂಸಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos