ಪ್ರಧಾನಿ ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ ಪ್ರದಾನ

ಪ್ರಧಾನಿ ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ ಪ್ರದಾನ

ದಕ್ಷಿಣ ಕೊರಿಯಾ(ಸಿಯೋಲ್): ಪ್ರಧಾನಿ ಮೋದಿ ಅವರು ಜಾಗತಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಗೆ ನೀಡಿರುವ ಪ್ರಶಸ್ತಿ, ದಕ್ಷಿಣ ಕೊರಿಯಾ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರಧಾನಿ ಮೋದಿ, ಈ ಪ್ರಶಸ್ತಿ ಕೇವಲ ನನಗೆ ವೈಯಕ್ತಿವಾಗಿ ನೀಡಿಲ್ಲ ಎಂದು ನಂಬುತ್ತೇನೆ. ಯಾಕೆಂದರೆ ಇದು 130 ಕೋಟಿ ಭಾರತೀಯರಿಗೆ ದೊರಕಿದದೆ. ಭಾರತ ಭಾರತ ದೇಶದ ಜನರ ಶ್ರಮ, ಪ್ರಭಾವ, ನೀಡಿದ ಧೈರ್ಯದಿಂದಾಗಿ ಕಳೆದ  ಐದು ವರ್ಷಗಳಲ್ಲಿ ಭಾರತ ಯಶಸ್ವಿ ಸಾಧಿಸಲು ಸಾಧ್ಯವಾಯಿತು ಎಂದರು.

ದೇಶದ ಜನರ ಭಾಗವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ದೇಶದ ಜನರ ನಾನು  ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

 ದೃಢ ನಿರ್ಧಾರಗಳ ಮೂಲಕ ದೇಶಿಯ ಹಾಗೂ ಜಾಗತಿಕವಾಗಿ ಶಾಂತಿಗಾಗಿ ಮೋದಿ ಅವರು ನೀಡಿದ ಕೊಡುಗೆಯನ್ನು ಸಿಯೋಲ್ ಶಾಂತಿ ಪ್ರಶಸ್ತಿ ಸಮಿತಿ ಪರಿಗಣಿಸಿರುವುದಾಗಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos