ಆಫ್ರಿಕಾದಲ್ಲಿ 350 ಆನೆಗಳ ಸಾವು

ಆಫ್ರಿಕಾದಲ್ಲಿ 350 ಆನೆಗಳ ಸಾವು

ನವದೆಹಲಿ,ಜು.02 : ಆಫ್ರಿಕಾ ಖಡದ ಬೋಟ್​ಸ್ವಾನಾ ರಾಷ್ಟ್ರದ ಕಾಡೊಂದರಲ್ಲಿ ಎರಡು ತಿಂಗಳ ಅವಧಿಯಲ್ಲಿ 350 ಆನೆಗಳು ನಿಗೂಢ ಸಾವನಪ್ಪಿವೆ. ಇಷ್ಟೊಂದು ಆನೆಗಳು ಸಾಯಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇ ಆರಂಭದಲ್ಲಿ ಒಕವಾಂಗೊ ಪ್ರಸ್ಥ ಭೂಮಿಯಲ್ಲಿ ಆನೆಗಳ ಸಾಲು ಸಾಲು ಶವಗಳು ಆನೆ ಸಂರಕ್ಷಕರ ಕಣ್ಣಿಗೆ ಬಿದ್ದಿದ್ದವು. ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ, ಆ ವರದಿ ಬರಲು ಹಲವು ವಾರಗಳೇ ಬೇಕಾಗುತ್ತವೆ ಎಂದು ಬೋಟ್​ಸ್ವಾನಾ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.ಒಂದು ತಿಂಗಳ ಬಳಿಕ ಹೆಚ್ಚಿನ ತನಿಖೆ ನಡೆಸಿದಾಗ ಈ ಪ್ರದೇಶದಲ್ಲಿ 350ಕ್ಕೂ ಹೆಚ್ದು ಆನೆಗಳು ನಿಗೂಢವಾಗಿ ಮೃತಪಟ್ಟಿರುವ ಸಂಗತಿ ತಿಳಿಯಿತು ಎಂದು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos